ಬಿರುಕು ಬಿಟ್ಟ ಹುಲಿಕುಂಟೆ ಕೆರೆಯಂಗಳ

Sanduru hulikunte Kere
ಸಂಡೂರು ತಾಲೂಕಿನ 73-ಹುಲಿಕುಂಟೆ ಗ್ರಾಮದ ಕೆರೆ ಬರದಿಂದ ಬಿರುಕು ಬಿಟ್ಟಿರುವುದು.
Published on

ಸಂಡೂರು: ತಾಲೂಕಿನ ನೀಡುಗರ್ತಿ ಗ್ರಾಪಂನ 73-ಹುಲಿಕುಂಟೆ ಗ್ರಾಮದ ಕೆರೆಯು ನೀರಿಲ್ಲದೆ ನೆಲ ಬಿರುಕು ಬಿಟ್ಟಿದೆ.

ಒಂದು ವರ್ಷ ಮಳೆ ಬಂತೆಂದರೆ ಯಾವಾಗಲು ನೀರು ಇರುತ್ತಿದ್ದ ಹುಲಿಕುಂಟೆ ಕೆರೆಯಂಗಳ ಬರದಿಂದ ಸಂಪೂರ್ಣ ಒಣಗಿ ಬಿರುಕು ಕಾಣಿಸಿಕೊಂಡಿದೆ. ಮೀನು ಸಾಕಣೆಯಿಂದ ಆದಾಯ ಬರುತ್ತಿತ್ತು. ಅದಕ್ಕೂ ಕೊಕ್ಕೆ ಬಿದ್ದಿದೆ. ದನ, ಕುರಿಗಳಿಗೂ ನೀರಿಲ್ಲ ಸಮಸ್ಯೆಯಾಗಿದೆ.

ಕೆಲ ದಿನಗಳ ಹಿಂದೆ ನಿರಂತರ ಮಳೆ ಸುರಿದರೂ ಕೆರೆಯ ಬಿರುಕುಗಳನ್ನು ಮುಚ್ಚಲಾಗಿಲ್ಲ. ಮುಂಗಾರು ಮಳೆ ಉತ್ತಮವಾಗಿ ಸುರಿದು ಕೆರೆ ಭರ್ತಿಯಾಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net