ಬಿರುಕು ಬಿಟ್ಟ ಬಿಳಾಲುಕೊಪ್ಪ ಬಸರಿಕಟ್ಟೆ ರಸ್ತೆ

jyp1 (1)
Published on

ಜಯಪುರ: ಅತ್ತಿಕುಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಪುರ- ಬಸರೀಕಟ್ಟೆ -ಹೊರನಾಡು

ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅದರಲ್ಲೂ ಬಿಳಾಲುಕೊಪ್ಪದಿಂದ ಬಸರಿಕಟ್ಟೆ

ವರೆಗಿನ 3 ಕಿಮೀ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ಸಾಧ್ಯವಾಗದಷ್ಟು ಹದಗೆಟ್ಟಿದೆ.

ರಸ್ತೆ ಪೂರ್ತಿ ಚರಂಡಿ ನೀರು ಹಾಗೂ ಸಣ್ಣ ಸಣ್ಣ ಹಳ್ಳಗಳ ನೀರು ರಸ್ತೆಯಲ್ಲೇ

ಹರಿಯುತ್ತಿರುವುದರಿಂದ ರಸ್ತೆ ಹಾಗೂ ಚರಂಡಿ ಕೊಚ್ಚಿ ಹೋಗುತ್ತಿದೆ. ಕಳೆದ ಕೆಲ

ವರ್ಷಗಳಿಂದಲೂ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗುತ್ತಿದೆ. ಆದರೆ ರಸ್ತೆ ದುರಸ್ತಿಗೆ

ಮಾತ್ರ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನಸ್ಸು ಮಾಡದಿರುವುದು

ವಿರ್ಪಯಾಸ.

ಕಳೆದ ವರ್ಷ ರಸ್ತೆ ಸಂಪೂರ್ಣ ಹಾಳಾದಾಗ ಸ್ಥಳಕ್ಕೆ ಆಗಮಿಸಿದ್ದ ಸಂಸದ ಕೋಟ ಶ್ರೀನಿವಾಸ

ಪೂಜಾರಿ, ಶಾಸಕ ರಾಜೇಗೌಡ, ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ರಸ್ತೆ ಹಾಗೂ

ಚರಂಡಿ ದುರಸ್ತಿ ಮಾಡುವ ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಸಮಸ್ಯೆ

ಪರಿಹಾರಕ್ಕೆ ಕ್ರಮ ವಹಿಸಿಲ್ಲ. ಕಳೆದ ವರ್ಷ ಸುರಿದ ಮಳೆಗೆ ಚರಂಡಿಗಳು

ಹಾಳಾಗಿದ್ದವು,ಅವುಗಳನ್ನು ದುರಸ್ತಿ ಮಾಡದ ಕಾರಣ ಈ ಬಾರಿ ಹಲವುಕಡೆ ಚರಂಡಿ ಜತೆಗೆ

ರಸ್ತೆಯೂ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿದೆ. ಕೆಲವುಕಡೆ ರಸ್ತೆ ಪಕ್ಕದಲ್ಲಿ ದೊಡ್ಡ

ಕಂದಕವೂ ಸೃಷ್ಟಿಯಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕೂಡಲೇ ಸಂಬಂಧಪಟ್ಟ

ಅಧಿಕಾರಿಗಳು ಚರಂಡಿ ಹಾಗೂ ರಸ್ತೆ ದುರಸ್ತಿಗೆ ಕ್ರಮವಿಸಬೇಕು ಎಂದು ಗ್ರಾಮಸ್ಥರು

ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net