ಮೆಟ್ರೋ ನಿರ್ಮಾಣ ಹಂತದ ಮಾರ್ಗದಲ್ಲಿ ಬಿರುಕು

Namma Metro Logo
Published on

ಬೆಂಗಳೂರು: ಕೆಂಗೇರಿಯಿಂದ ಚಲ್ಲಘಟ್ಟ ಮಾರ್ಗದಲ್ಲಿನ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಮಾರ್ಗದ ಕಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ.  ರಾಜರಾಜೇಶ್ವರಿ ಆಸ್ಪತ್ರೆ ಬಳಿ ನಿರ್ವಿುಸಲಾಗಿರುವ ಕಂಬದ ಮೇಲೆ ಅಳವಡಿಸಲಾದ ವಯಾಡಕ್ಟ್​ನ ಕೆಳಭಾಗದಲ್ಲಿನ ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಕಾಣುತ್ತಿವೆ. ಇದು ಕಾಮಗಾರಿ ಪೂರ್ಣ ಗೊಳ್ಳುವುದಕ್ಕೂ ಮುನ್ನವೇ ಈ ರೀತಿ ವಯಾಡಕ್ಸ್ ನಲ್ಲಿ ಬಿರುಕು ಕಾಣಿಸಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸ

ವಾಗಿದೆ.

ಈಗಲೇ ಹೀಗಾದರೆ, ಕಾಮಗಾರಿ ಪೂರ್ಣಗೊಂಡು ಸೇವೆ ಆರಂಭವಾದ ನಂತರ ಜನರ ಸುರಕ್ಷತೆ ಹೇಗೆ ಎಂಬ ಪ್ರಶ್ನೆಯೂ ಉದ್ಭವವಾಗುವಂತಾಗಿದೆ. ಬಿಎಂಆರ್​ಸಿಎಲ್ ಅಧಿಕಾರಿಗಳು ಈ ಬಿರುಕಿನ ಸುದ್ದಿಯನ್ನು ಅಲ್ಲಗಳೆದಿದ್ದು, ಈಗಾಗಲೆ ತಜ್ಞರು ಬಿರುಕು ಬಿಟ್ಟ ಸ್ಥಳವನ್ನು ಪರಿಶೀಲಿಸಿದ್ದಾರೆ.

ವಯಾಡಕ್ಟ್​ನಲ್ಲಿ ಸಿಮೆಂಟ್ ಬಿದ್ದಿರುವುದರಿಂದ ಯಾವುದೇ ಲೋಪವಾಗುವುದಿಲ್ಲ.ಅಲ್ಲಿ ಆಗಿರುವ ಹಾನಿ ಯನ್ನು ಸರಿಪಡಿಸಲಾಗುವುದು. ಸೇವೆ ನಂತರ ಅದರಿಂದ ಯಾವುದೇ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net