ಬೋರ್‌ವೆಲ್ ಕೊರೆತಕ್ಕೆ ಶಾಲೆ ಕಟ್ಟಡದಲ್ಲಿ ಬಿರುಕು

ald school
ಆಲ್ದೂರು ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ ಎದುರು ಬೋರ್‌ವೆಲ್ ಕೊರೆದಿರುವುದು.
Published on

ಆಲ್ದೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ ಬಳಿ ಜಲಜೀವನ್ ಮಿಷನ್ ಯೊಜನೆಯಡಿ ಕುಡಿಯುವ ನೀರಿನ ಸಂಪರ್ಕಕ್ಕೆ ಕೊಳವೆಬಾವಿ ಕೊರೆಯುವ ಸಂದರ್ಭದಲ್ಲಿ ಶಾಲಾ ಕಟ್ಟಡಗಳು ಬಿರುಕು ಬಿಟ್ಟಿದ್ದು ನಾಲ್ಕು ಕೊಠಡಿಗಳಿಗೆ ಹಾನಿಯಾಗಿದೆ.

ಮಂಗಳವಾರ ರಾತ್ರಿ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ ಬಳಿ ಕೊಳವೆಬಾವಿ ಕೊರೆದಿದ್ದು, ಶಾಲೆಯ ಮೂರು ಕೊಠಡಿಗಳು ಹಾಗೂ ನೆಲ ಬಿರುಕುಬಿಟ್ಟಿದೆ. ಬುಧವಾರ ಬೆಳಗ್ಗೆ ಶಾಲೆ ಆರಂಭಗೊಂಡಿದ್ದು ಶಿಕ್ಷಕರು ಆಗಮಿಸಿದಾಗ ನೆಲ ಹಾಗೂ ಗೋಡೆಗಳು ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿದೆ.
ಶಾಲಾ ಆಡಳಿತ ಮಂಡಳಿ ಗಮನಕ್ಕೂ ತರದೆ ಬೋರ್‌ವೆಲ್ ಕೊರೆದಿದ್ದಾರೆ. ಕಟ್ಟಡ ಹಳೆಯದಾಗಿದ್ದರೂ ಗಟ್ಟಿಮುಟ್ಟಾಗಿತ್ತು. ಆಲ್ದೂರು ಗ್ರಾಪಂನಿಂದ ಅನುಮತಿ ನೀಡಿಲ್ಲ ಎನ್ನುತ್ತಿದ್ದಾರೆ ಪಿಡಿಒ. ಹಾಗಾದರೆ ಅನುಮತಿ ನೀಡಿದವರು ಯಾರು? ಶಾಲೆಗೆ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಲಿತಾಂಶ ದೊರೆತ ಕಾರಣ ದಾಖಲಾತಿ ಹೆಚ್ಚಾಗಿದೆ. ಆದರೆ ಕೊಠಡಿ ಸಮಸೆ ್ಯಇದೆ. ಬೋರ್‌ವೆಲ್ ಕೊರೆಯುವ ವೇಳೆ ಕೊಠಡಿಗಳಿಗೆ ಹಾನಿಯಾಗಿದೆ. ಬೋರ್‌ವೆಲ್ ಕೊರೆಯುವ ಏಜೆನ್ಸಿ ಹಾನಿಯನ್ನು ತುಂಬಿಕೊಡಬೇಕು. ಈ ಬಗ್ಗೆ ಆಲ್ದೂರು ಠಾಣೆಗೆ ದೂರು ನೀಡಿದ್ದೇವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎ.ಯು.ಇಬ್ರಾಹಿಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net