ಕಾಳಿ ಹೊಸ ಸೇತುವೆ ಬಿರುಕು ವಿಡಿಯೋ ವೈರಲ್-ಜಿಲ್ಲಾಧಿಕಾರಿ ಸ್ಪಷ್ಟನೆ

Bridge crack
Published on

ಕಾರವಾರ: ಸದಾಶಿವಗಡ-ಕೋಡಿಬಾಗ ನಡುವೆ ಕಾಳಿ ನದಿಗೆ ಕಟ್ಟಲಾಗಿರುವ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವಿಡಿಯೋವೊಂದು ಶುಕ್ರವಾರ ವೈರಲ್ ಆಗಿದ್ದು, ಜನ ಆತಂಕಿತರಾಗಿದ್ದಾರೆ. ಸೇತುವೆ ಸುರಕ್ಷತೆಯನ್ನು ಸಂಬಂಧಪಟ್ಟ ಕಂಪನಿ ಪರಿಶೀಲಿಸಬೇಕು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ ಸೈಲ್ ಸಹ ಒತ್ತಾಯಿಸಿದ್ದಾರೆ.
ಸೇತುವೆಯ ಅಡಿಯಿಂದಲೇ ವಿಡಿಯೋ ಮಾಡಲಾಗಿದ್ದು, ಸಣ್ಣ ಬಿರುಕೂ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆ ಎಸಿ ಕನಿಷ್ಕ, ತಹಸೀಲ್ದಾರ್ ನಿಶ್ಚಲ ನರೋನಾ ಸ್ಥಳ ಪರಿಶೀಲನೆ ನಡೆಸಿದರು. ಐಆರ್‌ಬಿ ಸಿಜಿಎಂ ಮೋಹನದಾಸ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಲಿಖಿತ ವರದಿ ನೀಡಿದ್ದಾರೆ.
ಸೇತುವೆಯ ನಿರ್ಮಾಣ ಹಂತದಲ್ಲಿ ಸ್ಲರಿಯ ಅತಿಕ್ರಮಿಸುವಿಕೆ(ಓವರ್‌ಲ್ಯಾಪಿಂಗ್)ನಿಂದ ಆ ರೀತಿ ಕಾಣುತ್ತಿದೆ. ಸೇತುವೆ ಮೂಲ ಭಾಗಕ್ಕೆ ಯಾವುದೇ ಹಾನಿ ಸಂಭವಿಸಿರುವುದಿಲ್ಲ ಎಂದು ಐಆರ್‌ಬಿ ಅಧಿಕಾರಿಗಳು ವರದಿ ನೀಡಿದ್ದಾರೆ. ಭಯ ಹುಟ್ಟಿಸುವ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ. ತಪ್ಪು ಮಾಹಿತಿಯನ್ನು ಹರಡುವ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಲಾಗುವುದು. ಕಾಳಿ ನದಿಯ ವಿಡಿಯೋ ಮಾಡಿದ ವ್ಯಕ್ತಿಗಳನ್ನು ಗುರುತಿಸಲು ಜಿಲ್ಲಾಡಳಿತ ಮುಂದಾಗಿದ್ದು, ಅವರ ಮೇಲೆ ಕಾನೂನು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.


ಫೋಟೋ ತೆಗೆಯುವುದು ನಿರ್ಬಂಧ !!


ಕಾಳಿ ಸೇತುವೆ ಹಾಗೂ ಸುರಂಗದ ಸಮೀಪ ಫೋಟೋ, ವಿಡಿಯೋ ತೆಗೆಯುವುದನ್ನು ತಾಲೂಕು ಆಡಳಿತ ನಿರ್ಬಂಽಸಿದೆ. ಕೋಡಿಬಾಗದಲ್ಲಿ ಕೆಲವು ದಿನಗಳ ಹಿಂದೆ ಕುಸಿದ ಕಾಳಿ ನದಿ ಸೇತುವೆ ಸುತ್ತಮುತ್ತಲಿನ ಪ್ರದೇಶವು ಅತಿ ಸೂಕ್ಷ್ಮವಾಗಿರುತ್ತವೆ. ಅದೇ ರೀತಿ ಕಾರವಾರ-ಬಿಣಗಾ ಸಂಪರ್ಕಿಸುವ ಸುರಂಗ ಮಾರ್ಗಗಳಲ್ಲಿ ಮತ್ತು ಬಿಣಗಾ ಗುಡ್ಡದವರೆಗಿನ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಕಂಡು ಬಂದಿರುವುದರಿAದ ಈ ಪ್ರದೇಶಗಳನ್ನು ಸಹ ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. ಈ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸುವುದು ಅಥವಾ ಫೋಟೊಗ್ರಾಫಿ ಮಾಡುವುದು ಅಥವಾ ಇನ್ನಿತರ ಯಾವುದೇ ಚಟುವಟಿಕೆ ಕೈಗೊಳ್ಳುವುದು ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಈ ಸೂಕ್ಷ್ಮ ಪ್ರದೇಶಗಳಲ್ಲಿ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ಭಂಽಸಲಾಗಿದೆ ಎಂದು ಕಾರವಾರ ತಹಸೀಲ್ದಾರ್ ನಿಶ್ಚಲ ನರೋನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ಸೇತುವೆಯ ಮೇಲೆ ನಿಂತು ಇನ್ನೊಂದು ಸೇತುವೆ ಕಟ್ಟಿದ್ದಾರೆ. ರಾಷ್ಟೀಯ ಹೆದ್ದಾರಿ 66 ರ ಗುಂಟ ಜಿಲ್ಲೆಯಲ್ಲಿ ಇನ್ನೂ ಹಲವು ಸೇತುವೆಗಳಿದ್ದು, ಅವುಗಳ ಸಾಮರ್ಥ್ಯವನ್ನೂ ಅಧ್ಯಯನ ಮಾಡಬೇಕು.ಮಂಕಾಳ ವೈದ್ಯಜಿಲ್ಲಾ ಉಸ್ತುವಾರಿ ಸಚಿವಈ ಹಿಂದೆಯೇ ಕಾರವಾರ ಐಆರ್‌ಬಿ ಕಂಪನಿ ಮಾಡಿದ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದೆ. ಸುರಂಗ, ಕಾಳಿ ಸೇತುವೆಯ ಸುರಕ್ಷತೆಯ ಪ್ರಮಾಣಪತ್ರ ನೀಡುವಂತೆ ಕೇಳಿದ್ದೆ. ಕೆಲವು ದಿನ ಸುರಂಗ ಮಾರ್ಗದಲ್ಲಿ ವಾಹನ ಸಂಚಾರ ನಿಷೇಽಸಲಾಗಿತ್ತು. ಆದರೆ, ಟನಲ್‌ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಬಿಜೆಪಿಯ ಎಂಎಲ್‌ಸಿ ಪ್ರತಿಭಟನೆ ನಡೆಸಿ, ವಾಹನ ಸಂಚಾರಕ್ಕೆ ಅನುವು ಮಾಡಿಸಿಕೊಟ್ಟರು. ಈಗ ಸೇತುವೆ ಕುಸಿದಿದೆ. ಹೆದ್ದಾರಿಯಲ್ಲಿ ಓಡಾಡುವುದೇ ಭಯ ಹುಟ್ಟಿದೆ. ಗುಣಮಟ್ಟದ ಪ್ರಮಾಣಪತ್ರ ಕೇವಲ ಕಾಗದದಲ್ಲಿ ಮಾತ್ರ ಇದೆ.ಸತೀಶ ಸೈಲ್ಕಾರವಾರ ಶಾಸಕ  https://www.vijayavani.net/dishastar-management-training https://www.vijayavani.net/dishastar-management-training

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net