ಕಳಸ-ವಶಿಷ್ಠ ತೀರ್ಥ ರಸ್ತೆಯಲ್ಲಿ ಬಿರುಕು

12kls6
ಕಳಸ-ವಶಿಷ್ಠ ತೀರ್ಥಕ್ಕೆ ಹೋಗುವ ರಸ್ತೆಯಲ್ಲಿ ಬಿರುಕು ಬಿಟ್ಟಿರುವುದು.
Published on

ಕಳಸ: ಕಳಸ-ವಶಿಷ್ಠ ತೀರ್ಥಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಈ ರಸ್ತೆ ಕಳಸದಿಂದ ಕಂಚಿನಕೆರೆ, ಕಾಳಿಕೆರೆ, ಮುಂಡಾಣೆ, ವಶಿಷ್ಠ ತೀರ್ಥಕ್ಕೆ ಹೋಗುವ ರಸ್ತೆಯಾಗಿದ್ದು, ಈ ಭಾಗದಲ್ಲಿ ನೂರಾರು ಮನೆಗಳಿವೆ ಅಲ್ಲದೆ ವಶಿಷ್ಠ ತೀರ್ಥದಲ್ಲಿರುವ ತೂಗು ಸೇತುವೆ ವೀಕ್ಷಿಸಲು ನೂರಾರು ಪ್ರವಾಸಿಗರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇದೀಗ ಈ ರಸ್ತೆ ಒಂದು ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ರಸ್ತೆ ಬಿರುಕು ಕಾಣಿಸಿಕೊಂಡಿರುವ ಸಮೀಪವೇ ಇರುವ ಮನೆಗೂ ಅಪಾಯ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net