

ಬೆಂಗಳೂರು: ಸಿಆರ್ಪಿಎಫ್ ಯೋಧರು ದೇಶಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸದಲ್ಲಿ ನಿರತರಾಗಿದ್ದರೆ, ಅವರ ಕುಟುಂಬ ಮನೆಯಲ್ಲಿ ಪ್ರತಿನಿತ್ಯ ಮಾಸ್ಕ್ ಹಾಗೂ ವೈಯಕ್ತಿಕ ಸುರಕ್ಷತಾ ಉಪಕರಣ (ಪಿಪಿಇ) ತಯಾರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಪೂರೈಸುತ್ತಿದ್ದಾರೆ.
ಯಲಹಂಕದಲ್ಲಿರುವ ಸಿಆರ್ಪಿಎಫ್ ಯೋಧರ ಕುಟುಂಬ ಕಲ್ಯಾಣ ಸಂಘದ ಮಹಿಳಾ ಸದಸ್ಯರು (ಆರ್ಸಿಡಬ್ಲ್ಯುಎ) ಮಾಸ್ಕ್ ಹಾಗೂ ಪಿಪಿಇ ಕಿಟ್ ತಯಾರಿಸುತ್ತಿದ್ದಾರೆ. ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೆಬಲ್ಗಳು ಹಾಗೂ ಸಬ್ ಇನ್ಸ್ಪೆಕ್ಟರ್ಗಳ ಪತ್ನಿಯರು ನಿತ್ಯ 40ರಿಂದ 50 ಪಿಪಿಇ ಕಿಟ್ಗಳನ್ನು ತಯಾರಿಸಿ ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಚ್ಛತಾ ಕೆಲಸಗಳಲ್ಲಿ ನಿರತರಾಗಿರುವವರಿಗೆ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ನಿಮ್ಹಾನ್ಸ್ ಆಸ್ಪತ್ರೆಗೆ 2,000 ಮಾಸ್ಕ್ ಮತ್ತು ಕಿಟ್ಗಳನ್ನು ಪೂರೈಸಿದ್ದಾರೆ. ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ತಂಡವು ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ. ಅಲ್ಲದೆ, ಪಿಪಿಇ ಕೆಲಸದಲ್ಲಿ ನಿರತವಾಗಿರದ ಮತ್ತೊಂದು ತಂಡ ರೈತರಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಅವಶ್ಯಕತೆ ಇರುವವರಿಗೆ ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದಲ್ಲದೆ ಬಡವರು ಹಾಗೂ ನಿರ್ಗತಿಕರಿಗೆ ಆಹಾರ ವಿತರಣೆ ಕೆಲಸವನ್ನೂ ಮಾಡುತ್ತಿದೆ ಎಂದು ಸಿಆರ್ಪಿಎಫ್ ಡಿಐಜಿ ಸನಂದ್ ಕಮಲ್ ಮಾಹಿತಿ ನೀಡಿದ್ದಾರೆ.
ಆರ್ಸಿಡಬ್ಲ್ಯುಎ ಮೊದಲಿನಿಂದಲೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಮಾಸ್ಕ್, ಏಪ್ರನ್, ಗ್ಲೌಸ್, ಗೌನ್ಗಳನ್ನು ಒಳಗೊಂಡಿರುವ ಪಿಪಿಇ ಕಿಟ್ಗಳನ್ನು ತಯಾರಿಸಿ ಕರೊನಾ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ಆಸ್ಪತ್ರೆಗಳ ವೈದ್ಯರು ಮತ್ತು ನರ್ಸ್ಗಳಿಗೆ ನೀಡಲಾಗುತ್ತಿದೆ. ಮಹಿಳಾ ಸಿಬ್ಬಂದಿ ಈ ಕೆಲಸದಲ್ಲಿ ನಿರತರಾಗಿದ್ದು, ಅವರಿಗೆ ಆಸ್ಪತ್ರೆ ಯಿಂದಲೇ ತರಬೇತಿ ಕೊಡಿಸಲಾಗಿದೆ. | ಡಾ.ಅಭಾ ಸಕ್ಸೇನಾ ಮುಖ್ಯಸ್ಥೆ, ಆರ್ಸಿಡಬ್ಲ್ಯುಎ https://www.vijayavani.net/sri-dharmasthala-veerendra-heggade-vishu-jaatre-belthangadi/