ವೀರ ಯೋಧರಿಗೆ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ

wwwwwwwww
Published on


ಮಂಗಳೂರು : ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಕ್ಯಾ.ಎಂ.ವಿ. ಪ್ರಾಂಜಲ್, ಕ್ಯಾ. ಶುಭಂ ಗುಪ್ತ, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ಟ್, ಪ್ಯಾರಾಟ್ರೂಪರ್ ಸಚಿನ್ ಲಾರ್ ಇವರಿಗೆ ರಾಷ್ಟ್ರಭಕ್ತ ನಾಗರಿಕರು ಮಂಗಳೂರು ಸಂಘಟನೆ ವತಿಯಿಂದ ಶುಕ್ರವಾರ ನಗರದ ಕದ್ರಿ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿವೃತ್ತ ಸೈನಿಕರಾದ ಕ್ಯಾ. ಬೃಜೇಶ್ ಚೌಟ, ಕ್ಯಾ.ದೀಪಕ್ ಅಡ್ಯಂತಾಯ, ಕೆ.ಪಿ.ಟಿ.ಯ ಪ್ರಾಂಶುಪಾಲ ಹರೀಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಸುಜಿತ್ ಪ್ರತಾಪ್, ಈಶ್ವರ್ ಶೆಟ್ಟಿ, ಪ್ರಕಾಶ್ ಗರೋಡಿ, ಲೋಕೇಶ್ ಶೆಟ್ಟಿ, ಸಾಕ್ಷಾತ್ ಶೆಟ್ಟಿ
ಫ್ರಾಂಕ್ಲಿನ್ ಮೊಂತೆರೊ, ಅಜಿತ್ ಬೋಪಯ್ಯ, ಅನುಶ್ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net