

ಹುಬ್ಬಳ್ಳಿ: ಇಲ್ಲಿಯ ಚೇತನ ಪಬ್ಲಿಕ್ ಸ್ಕೂಲ್ ಸ್ಮಾರ್ಟ್ ಕ್ಯಾಂಪಸ್ನಲ್ಲಿ ಶನಿವಾರ ರೈತರೊಂದಿಗೆ ರಕ್ಷಾ ಬಂಧನ ಆಚರಿಸಲಾಯಿತು.
ರೈತರಾದ ಶಿವರಾಜ ಗದಗಿನ, ಚನ್ನಬಸವಣ್ಣ ದ್ಯಾವಪ್ಪನವರ ಹಾಗೂ ಚನ್ನಬಸಪ್ಪ ಲಿಂಗಶೆಟ್ಟಿ ಅವರನ್ನು ಗೌರವಿಸಲಾಯಿತು. ರೈತ ದೇಶದ ಬೆನ್ನೆಲುಬು, ರೈತರು ದೇಶ ವಾಸಿಗಳಿಗೆ ಅನ್ನ ನೀಡಿ ಒಂದು ರೀತಿಯಲ್ಲಿ ಜನರ ರಕ್ಷಣೆ ಮಾಡುತ್ತಾರೆ ಎಂಬ ವಿಷಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.
ಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಮಹೇಶ ದ್ಯಾವಪ್ಪನವರ, ಪ್ರಾಂಶುಪಾಲ ಎಂ. ಎಂ. ಕರೇಗೌಡರ, ಇತರರು ಉಪಸ್ಥಿತರಿದ್ದರು. ಶಿಕ್ಷಕ ಜಿ.ಎಂ. ಕಾಮತ ಸ್ವಾಗತಿಸಿದರು. ಶಿಕ್ಷಕಿ ಅನನ್ಯಾ ದೇಶಪಾಂಡೆ ಮಾತನಾಡಿದರು. ವಿದ್ಯಾರ್ಥಿನಿ ಪ್ರಿಯಾ ಹುಲಗೂರ ನಿರೂಪಿಸಿದಳು. ಶಿಕ್ಷಕಿ ಸ್ಯಾಂಡಿ ಅಂಗಡಿ ವಂದಿಸಿದರು.