ಸಿಬ್ಬಂದಿಗೂ ಸಿಪಿಆರ್​ ಜ್ಞಾನ ಅಗತ್ಯ

CPR
Published on

ಡಾ. ಎಚ್​.ಅಶೋಕ್​ ಅನಿಸಿಕೆ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ತರಬೇತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಿಪಿಆರ್​ ಚಿಕಿತ್ಸೆಯ ಸೂಕ್ತ ತರಬೇತಿ ಅಥವಾ ಜ್ಞಾನ ಹೊಂದಿದ್ದಲ್ಲಿ ಹೃದಯಾಘಾತಕ್ಕೆ ಒಳಗಾದವರ ಜೀವ ಉಳಿಸಬಹುದು. ಆಸ್ಪತ್ರೆಯಲ್ಲಿರುವ ವೈದ್ಯರಿಗಷ್ಟೇ ಅಲ್ಲ, ಎಲ್ಲ ಸಿಬ್ಬಂದಿಗೂ ಈ ವಿಶೇಷ ಚಿಕಿತ್ಸೆಯ ಅರಿವು, ಕೌಶಲ ಲಭಿಸುವಂತಾಗಲು ತರಬೇತಿ ನೀಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ತಿಳಿಸಿದರು.

Ashok
ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಶೂಶ್ರೂಷಕ ಅಧಿಕಾರಿಗಳು, ಭದ್ರತಾ ಹಾಗೂ ಇನ್ನಿತರ ಸಿಬ್ಬಂದಿಗೆ ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಸಹಕಾರದಲ್ಲಿ ಆಯೋಜಿಸಿದ್ದ ಕಾರ್ಡಿಯಾಕ್​ ಪಲ್ಮನರಿ ರಿಸಪಿಟೇಶನ್​ (ಸಿಪಿಆರ್​) ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಪಿಆರ್​ ಚಿಕಿತ್ಸಾ ವಿಧಾನವು ಜೀವ ಉಳಿಸುವ ತಂತ್ರವಾಗಿದೆ. ಅದನ್ನು ಕರಗತ ಮಾಡಿಕೊಂಡರೆ ತುರ್ತು ಸಂದರ್ಭಗಳಲ್ಲಿ ಈ ಚಿಕಿತ್ಸೆ ಮೂಲಕ ಅಮೂಲ್ಯವಾಗಿರುವ ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದರು.

ಜಿಲ್ಲಾಸ್ಪತ್ರೆಯ ಆರ್​ಎಂಒ ಡಾ. ವಾಸುದೇವ, ಕೆಎಂಸಿಯ ಡಾ.ದಿವ್ಯಾ, ಡಾ.ಹೊಳ್ಳ, ಡಾ.ರತ್ನಾ, ಡಾ. ಮೇರಿ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಇದ್ದರು. ನರ್ಸಿಂಗ್​ ಕಾಲೇಜಿನ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು. ಹೃದಯಸ್ತಂಭನಕ್ಕೆ ಒಳಗಾದವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವುದನ್ನು ವೈದ್ಯರು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net