

ವಿಜಯಪುರ:ಹೃದಯಾಘಾತ ಸಂದರ್ಭದಲ್ಲಿ ಜೀವ ಉಳಿಸುವ ಪ್ರಥಮ ಚಿಕಿತ್ಸೆಯಾದ ಸಿಪಿಆರ್ ಚಿಕಿತ್ಸೆ ತುಂಬಾ ಸಹಕಾರಿಯಾಗಿದೆ. ಎಲ್ಲರೂ ಸಿಪಿಆರ್ ವಿಧಾನದ ತಿಳಿವಳಿಕೆ ಹೊಂದಬೇಕು ಎಂದು ವೈದ್ಯ ಡಾ. ಮಲ್ಲನಗೌಡ ಪಾಟೀಲ ಹೇಳಿದರು.
ನಗರದ ಪ್ರೇರಣಾ ಪಿಯು ಕಾಲೇಜಿನಲ್ಲಿ ಬಿ.ಎಂ. ಪಾಟೀಲ ಡೀಮ್ಡ್ ಮಹಾವಿದ್ಯಾಲಯದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೃಹತ್ ಸಿಪಿಆರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡು ಸ್ವಯಂ ಸೇವಕರಾಗಿ ಜನರನ್ನು ಕಾಪಾಡುವ ಸೈನಿಕರಾಗಬೇಕು ಎಂದ ಅವರು, ಸದ್ಯದ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಸರಿಯಾದ ಸಮಯಕ್ಕೆ ಸಿಗದಿರುವ ಸಹಾಯ ಮತ್ತು ಸಿಪಿಆರ್ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅವರು ಜಾಗೃತಿ ಮೂಡಿಸಿದರು.
ವೈದ್ಯರಾದ ರಾಕೇಶ ಬಳಮಕರ, ಯಲಗೂರಸ್ವಾಮಿ ಕೋಲಕರ, ಪರೀತ ಕೋಟಿ, ಅನಿಲ ಸಜ್ಜನ, ಜೆ. ಪ್ರಕಾಶ, ಶ್ರೀಧರ ಕೋನೇರು, ಮಾನಸಿ ಸಾಳುಂಕೆ, ನಾಗಾರ್ಜುನ ಸಿ.ಎಸ್., ಮಹೇಶ ಕುಸುರಿ ಮತ್ತಿತರರಿದ್ದರು.
ವಿಜಯಪುರದ ಪ್ರೇರಣಾ ಪಿಯು ಕಾಲೇಜಿನಲ್ಲಿ ಬೃಹತ್ ಸಿಪಿಆರ್ ಜಾಗೃತಿ ಕಾರ್ಯಕ್ರಮ ನಡೆಯಿತು. ಡಾ. ಮಲ್ಲನಗೌಡ ಪಾಟೀಲ, ಮಾನಸಿ ಸಾಳುಂಕೆ, ರಾಕೇಶ ಬಳಮಕರ ಮತ್ತಿತರರಿದ್ದಾರೆ.