ಚೆಂಗಳದಲ್ಲಿ ಸಿಪಿಎಂ ಪ್ರತಿಭಟನೆ

New Project (19)
Published on

ಕಾಸರಗೋಡು: ಚೆಂಗಳ ಪಂಚಾಯಿತಿಯ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆಯುತ್ತಿದೆ ಎಂದು ಆರೋಪಿಸಿ ಸಿಪಿಎಂ ಕಾಸರಗೋಡು ಪ್ರದೇಶ ಸಮಿತಿ ಆಶ್ರಯದಲ್ಲಿ ಚೆಂಗಳ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಇತ್ತೀಚೆಗೆ ನಡೆಯಿತು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ಸುಮತಿ ಪ್ರತಿಭಟನಾ ಧರಣಿ ಉದ್ಘಾಟಿಸಿದರು. ಪ್ರಾದೇಶಿಕ ಸಮಿತಿ ಸದಸ್ಯೆ ಕೆ. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಟಿಎಂಎ ಕರೀಂ, ಪಿ.ಶಿವಪ್ರಸಾದ್, ಕೆ.ರವೀಂದ್ರನ್, ಸುಭಾಷ್ ಪಾಡಿ, ವೇಣುಗೋಪಾಲನ್, ಲತೀಫ್ ನಾರಂಬಾಡಿ, ಸವಿತಾ, ಕೆ.ಗಿರೀಶ್ ಉಪಸ್ಥಿತರಿದ್ದರು. ಸಿಪಿಎಂ ಚೆಂಗಳ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಸಿ.ವಿ.ಕೃಷ್ಣನ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net