ಪಹಲ್ಗಾಮ್ ದಾಳಿ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

raichur
raichur
Published on

ರಾಯಚೂರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಖಂಡಿಸಿ ಮಂಗಳವಾರ ಸಿಪಿಐ(ಎಂ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ಧೇಶಿಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ ಮಾತನಾಡಿ, ಕಾಶ್ಮೀರದಲ್ಲಿ ಉಗ್ರವಾದಿಗಳು ನಡೆಸಿದ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು. ೨೮ ಜನರು ಉಗ್ರವಾದಿಗಳ ದಾಳಿಯಲ್ಲಿ ಅಸುನೀಗಿದ್ದಾರೆ. ಅವರ ದುಃಖದಲ್ಲಿ ನಾವಿದ್ದೇವೆ. ಅವರಿಗೆ ಮನದಾಳ ಸಾಂತ್ವನ. ಹತ್ಯೆಯಲ್ಲಿ ಮಡಿದವರು ಇತರೆ ಜಾತಿ ಧರ್ಮದ

ಜನರೂ ಇರುವರು.

ಆದರೆ ಈ ದುಷ್ಕೃತ್ಯವನ್ನು ಒಂದು ಸಮುದಾಯದ ತಲೆಗೆ ಮಾತ್ರ ಕಟ್ಟುವಂತಹ ಕುಟಿಲತೆ ನಡೆಯುತ್ತಿದೆ. ಇದು ಕೋಮು ವಿಚ್ಛಿದ್ರಕಾರ ಉದ್ಧೇಶ ಹೊಂದಿದೆ ಎಂದರು. ತನ್ನ ಭದ್ರತಾ ಲೋಪವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅಪಾದಿಸಿದರು. ಕಾಶ್ಮೀರದ ಜನತೆಯು ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೂ ಕೋಮುದ್ವೇಷ ಹಬ್ಬಿಸುವುದನ್ನು ಸಂಘಪರಿವಾರದ ಜನತೆ ನಿಲ್ಲಿಸಿಲ್ಲ. ಕಾಶ್ಮೀರದಲ್ಲಿ ಸಿಪಿಐಎಂ ಪಕ್ಷದ ಶಾಸಕರಾಗಿರುವ ಕಾ.ಯೂಸೂ-ï ತಾರಿಗಾಮಿ ಅವರು ನೊಂದವರನ್ನು ಸಂತೈಸುವಲ್ಲಿ, ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಅವರ ಕುಟುಂಬದಲ್ಲಿ ಮೂರು ಜನರು ಉಗ್ರಗಾಮಿಗಳಿಗೆ ಬಲಿಯಾದ ಹಿನ್ನೆಲೆ ಅವರು ನೋವು ಹೊಂದಿದ್ದಾರೆ. ಉಗ್ರವಾದ ಭಯೋತ್ಪಾದನೆಯ ವಿರುದ್ಧ ನಿರಂತರ ಹೋರಾಟವನ್ನು ಪಕ್ಷ ನಡೆಸಲಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕ ಕಾರ್ಯದರ್ಶಿ ಹೆಚ್.ಪದ್ಮಾ, ಡಿ.ಎಸ್.ಶರಣಬಸವ, ಹನುಮಂತ,ಗೋರಕಮ್ಮ, ಮಲ್ಲೇಶ,ನಾಗರಾಜ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net