ಕರ್ತವ್ಯ ನಿರ್ಲಕ್ಷೃದಿಂದ ಉದ್ವಿಗ್ನ ಪರಿಸ್ಥಿತಿ: ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆರೋಪ

CPIM press conference Mandya
Published on

ಮಂಡ್ಯ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷೃ ತೋರಿದ ಹಿನ್ನಲೆ ಮದ್ದೂರು ಪಟ್ಟಣದಲ್ಲಿ ಉದ್ವಿಗ್ನತೆ ಸೃಷ್ಠಿಯಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆರೋಪಿಸಿದರು.

ಯಾವುದೇ ಗಲಭೆಯಾಗದಂತೆ ಕ್ರಮ ವಹಿಸಬೇಕಾದ ಕರ್ತವ್ಯವನ್ನು ಅಧಿಕಾರಿಗಳು ನಿರ್ವಹಣೆ ಮಾಡಿಲ್ಲ. ಅದರಂತೆ ಮದ್ದೂರು ಪಟ್ಟಣದ ಉದ್ವಿಗ್ನ ಸ್ಥಿತಿಗೆ ಕಾರಣರಾದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ ನಡೆಸಿದವರನ್ನು ಜಿಲ್ಲಾಡಳಿತ ಪತ್ತೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಲ್ಲು ತೂರಾಟದಿಂದ ಮದ್ದೂರು ಪಟ್ಟಣದಲ್ಲಿ ಉಂಟಾದ ಉದ್ವಿಗ್ನತೆ ಕೋಮುಗಳ ನಡುವಿನ ಸೌಹಾರ್ದತೆಗೆ ಧಕ್ಕೆ ತಂದೊಡ್ಡಿದೆ. ಇದನ್ನು ಕೆಲ ಶಕ್ತಿಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಇವೆಲ್ಲವೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷೃತೆಯನ್ನು ತೋರುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಸಿ.ಕುಮಾರಿ, ಬಿ.ಹನುಮೇಶ್, ಸುಶೀಲಾ, ಚಂದ್ರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net