ಹೊಸ ಕಾನೂನು ವಾಪಸ್​ ಪಡೆಯಲಿ

CPIM party members protest in koppal for fullfilltheir demands
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಐಎಂ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ನಿರುಪಾದಿ ಬೆಣಕಲ್​, ಸುಂಕಪ್ಪ ಗದಗ, ಹುಸೆನಪ್ಪ ಕೆ., ಹನುಮೇಶ ಕಲಮಂಗಿ, ಮಂಜುನಾಥ ಡಗ್ಗಿ, ಕೃಷ್ಣಪ್ಪ, ಫಕೀರಮ್ಮ ಮಿರಗನತಂಡಿ, ಅಮರಮ್ಮ ಗದಗ, ಹುಸೇನ್​ ಸಾಬ್​ ನದಾಫ್​, ರಾಮಣ್ಣ ದೊಡ್ಡಮನಿ, ರೇಣುಕಮ್ಮ ಇದ್ದರು.
Published on

ಕೊಪ್ಪಳ: ವಿವಿಧ ಪರೀಾ ಅಕ್ರಮ ಹಾಗೂ ಹೊಸ ಕಾನೂನುಗಳನ್ನು ವಾಪಸ್​ ಪಡೆಯಲು ಆಗ್ರಹಿಸಿ ಸಿಪಿಐಎಂ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದ ಬಸ್​ ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಶಿಕ್ಷಣ ಖಾಸಗಿಕರಣ ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ಎನ್​ಇಪಿ-2020 ಜಾರಿ ಮಾಡಿದೆ. ಜತೆಗೆ ಪರೀೆಗಳನ್ನು ಕೇಂದ್ರೀಕರಿಸಿ ಭ್ರಷ್ಟಚಾರಕ್ಕೆ ದಾರಿ ಮಾಡಿ ಕೊಡುತ್ತಿದೆ. ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ ಮೂಲಕ ಅವ್ಯವಹಾರ ನಡೆಯುತ್ತಿದೆ. ನೀಟ್​ ಹಾಗೂ ಎನ್​ಇಟಿಯಲ್ಲಿ ಅಕ್ರಮ ನಡೆದಿರುವುದು ಇದಕ್ಕೆ ಸಾ. ಬಡ ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡುತ್ತಿದೆ. ಸಿಬಿಐ ತನಿಖೆಗೆ ನೀಡಿದ್ದು, ಎನ್​ಇಟಿ ಪರೀೆ ನಡೆದ ಮರು ದಿನವೇ ರದ್ದುಪಡಿಸಲಾಗಿದೆ. ಇನ್ನು ಯಾವುದೇ ಚರ್ಚೆ ನಡೆಸದೇ ಹೊಸ ಕಾನೂನುಗಳನ್ನು ಜಾರಿ ಮಾಡಲಾಗಿದೆ. ದೇಶದ್ರೋಹ ಸೇರಿ ಇತರ ವಿಷಯಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಸುಪ್ರೀಂ ಕೋರ್ಟ್​ ತೀರ್ಪಿಗೆ ವಿರುದ್ಧವಾದ ಅಂಶಗಳನ್ನು ಸೇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಪರೀೆ ಕೇಂದ್ರೀಕರಣಗೊಳಿಸದೇ ಆಯಾ ರಾಜ್ಯದಲ್ಲಿ ನಡೆಸಲು ಅನುಮತಿಸಬೇಕು. ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು. ಪರೀಾ ಏಕಸ್ವಾಮ್ಯತ್ವ ಕೈಬಿಡಬೇಕು. ಜನ ವಿರೋಧಿ ಕಾನೂನುಗಳನ್ನು ವಾಪಸ್​ ಪಡೆಯಬೇಕು. ಅನಗತ್ಯ ಅಂಶಗಳ ಕುರಿತು ಸಮಗ್ರವಾಗಿ ಸಂಸತ್​ನಲ್ಲಿ ಚರ್ಚಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರುಪಾದಿ ಬೆಣಕಲ್​, ಸುಂಕಪ್ಪ ಗದಗ, ಹುಸೆನಪ್ಪ ಕೆ., ಹನುಮೇಶ ಕಲಮಂಗಿ, ಮಂಜುನಾಥ ಡಗ್ಗಿ, ಕೃಷ್ಣಪ್ಪ, ಫಕೀರಮ್ಮ ಮಿರಗನತಂಡಿ, ಅಮರಮ್ಮ ಗದಗ, ಹುಸೇನ್​ ಸಾಬ್​ ನದಾಫ್​, ರಾಮಣ್ಣ ದೊಡ್ಡಮನಿ, ರೇಣುಕಮ್ಮ ಭೀಮನೂರು, ಶಾಂತಮ್ಮ ಬೆಂಗಳೂರಮನಿ, ಸುಂಕಮ್ಮ ಕುಕನೂರು, ಸಂಜೀವಮ್ಮ ಕುಕನೂರು, ರಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net