

ಮಂಗಳೂರು: ಬೆಲೆಏರಿಕೆ , ನಿರುದ್ಯೋಗ ತಡೆಗಟ್ಟಿರಿ ಮತ್ತು ಪ್ರಜಾಪ್ರಭುತ್ವ ಉಳಿಸಿರಿ- ಪ್ರಚಾರಾಂದೋಲನ ವಾರಾಚರಣೆ ನಡೆಸಲು ಸಿಪಿಐ (ಎಂ) ಕೇಂದ್ರ ಸಮಿತಿಯು ಕರೆ ನೀಡಿದ್ದು, ಮಂಗಳವಾರ ಮೂಡುಬಿದಿರೆ ಸ್ವರಾಜ್ಯ ಮೈದಾನದ ಬಳಿ ಬಹಿರಂಗ ಸಾರ್ವಜನಿಕ ಸಭೆ ಜರುಗಿತು.
ಸಭೆ ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ ಅವರು, 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆಹಾರ ,ಅಗತ್ಯ ವಸ್ತುಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ , ರಸಗೊಬ್ಬರ ಇನ್ನಿತರ ವಸ್ತುಗಳ ದರ 700 ಶೇ. ದಷ್ಟು ಏರಿಕೆಯಾಗಿದೆ ಎಂದು ಆರೋಪಿಸಿದರು.
ನಿರುದ್ಯೋಗ ನಿಯಂತ್ರಿಸುವ ಯಾವುದೇ ಕಾರ್ಯಕ್ರಮಗಳಿಲ್ಲ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುದಾನ ಕಡಿತ ಗೊಳಿಸಲಾಗಿದೆ. ಸಾರ್ವಜನಿಕ ಉದ್ದೀಮೆಗಳನ್ನು ಖಾಸಗೀಕರಣಗೊಳಿಸಿ ಕಾರ್ಮಿಕರು ಕೆಲಸ ಕಳಕೊಳ್ಳುವಂತಾಯಿತು ಎಂದು ಅವರು ದೂರಿದರು.
ತಾಲೂಕು ಕಾರ್ಯದರ್ಶಿ ರಮಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಪಕ್ಷದ ಮುಂದಾಳುಗಳಾದ ಗಿರೀಜ, ಶಂಕರ ಉಪಸ್ಥಿತರಿದ್ದರು.
ಕೃಷ್ಣಪ್ಪ ಸ್ವಾಗತಿಸಿದರು. ರಾಧಾ ವಂದಿಸಿದರು