

ತುಮಕೂರು: ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಕೇಂದ್ರ, ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿ ನಗರ ಶಾಸಕರ ಕಚೇರಿ ಮುಂದೆ ಸಿಪಿಐ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪಾಲಿಕೆ ಆವರಣದಲ್ಲಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಚೇರಿ ಎದುರು ಸಮಾವೇಶಗೊಂಡಿದ್ದ ಕಾರ್ಯಕರ್ತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ವಾತನಾಡಿ, ರಾಜ್ಯ ಸರ್ಕಾರ ಜನತೆ ಕರೊನಾ ಸಂಕಷ್ಟದಲ್ಲಿರುವಾಗ ಮೂರು ಜನವಿರೋಧಿ ಕಾನೂನು ಜಾರಿಗೊಳಿಸಲು ಸುಗ್ರೀವಾಜ್ಞೆ ಹೊರಡಿಸಿದೆ, ಸೆ.21ರಿಂದ ಆರಂಭವಾಗುವ ಅಧಿವೇಶನದಲ್ಲಿ ಅಂಗೀಕಾರಕ್ಕೂ ಸಿದ್ಧತೆ ನಡೆದಿದೆ ಎಂದರು. ಕರ್ನಾಟಕ ಭೂ ಸುಧಾರಣ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹಾಗೂ ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನ ಸಮೂಹಗಳ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಉಂಟುಮಾಡಲಿವೆ ಎಂದು ಆತಂಕಿಸಿದರು.
ಆರ್ಥಿಕ ಅಸವಾನತೆ ಜಾಸ್ತಿ ಮಾಡುವ ಜತೆಗೆ ದಲಿತ, ಅಲ್ಪಸಂಖ್ಯಾತ ಮಹಿಳೆ ಹೇಗೆ ವಿವಿಧ ಸಾವಾಜಿಕ ಜನ ಸಮೂಹಗಳನ್ನು ಮತ್ತಷ್ಟು ದಮನಕ್ಕೀಡು ವಾಡುವಂತಹ ಸಾವಾಜಿಕ ಅಸವಾನತೆ ಮತಷ್ಟು ಹೆಚ್ಚಿಸುತ್ತವೆ ಎಂದರು.ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಶಶಿಕಾಂತ್, ನಾಗಣ್ಣ, ಹಳ್ಳಪ್ಪ, ದೊಡ್ಡತಿಮ್ಮಯ್ಯ, ವೆಂಕಟೇಶ್, ದೊಡ್ಡಯ್ಯ, ಆನಂದ, ಕೊರಟಗೆರೆ ತಾಲೂಕು ವಿಜಯ್ ಕುವಾರ್, ಗೋವಿಂದರಾಜು, ರಾಜಣ್ಣ, ಜಾಫರ್, ಎಐಎಸ್‌ಎಫ್ ಮುಖಂಡ ಚಂದ್ರಶೇಖರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.