ಹುಬ್ಬಳ್ಳಿ: ಸಮಗ್ರ ಸಮೃದ್ಧ- ಸೌಹಾರ್ದ ಕರ್ನಾಟಕ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಘೋಷಣೆಯಡಿ ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐಎಂ) ಧಾರವಾಡ ಜಿಲ್ಲಾ 13ನೇ ಸಮ್ಮೇಳನ ನ. 10ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸದಸ್ಯ ರುದ್ರಪ್ಪ ಜಾಬಿನ ಧ್ವಜಾರೋಹಣ ನೆರವೇರಿಸುವರು. ಸಿಪಿಐ(ಎಂ) ರಾಜ್ಯ ಕಾರ್ಯದಶಿರ್ ಮಂಡಳಿ ಸದಸ್ಯ ಜಿ. ನಾಗರಾಜ ಉದ್ಘಾಟನೆ ಮಾಡುವರು. ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ, ಹಿರಿಯ ಮುಖಂಡರಾದ ಬಿ.ಎಸ್. ಸೊಪ್ಪಿನ, ಬಿ.ಐ. ಈಳಿಗೇರ ಉಪಸ್ಥಿತರಿರುವರು.
ಪ್ರತಿನಿಧಿ ಅಧಿವೇಶನದಲ್ಲಿ ಆಯ್ಕೆಗೊಂಡ ಪ್ರತಿನಿಧಿಗಳು ಪ್ರಸ್ತುತ ರಾಜಕೀಯ, ಆಥಿರ್ಕ, ಸಾಮಾಜಿಕ ಪರಿಸ್ಥಿತಿಗಳ ಕುರಿತು ಚರ್ಚಿಸಲಿದ್ದು, ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವರು. ನಂತರ ಸಮಾರೋಪ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.