ವಕೀಲ ಮೇಲೆ ಹಲ್ಲೆಗೈದ ಸಿಪಿಐ ವಜಾಗೊಳಿಸಿ

Harapanahalli Lawyers
ಹರಪನಹಳ್ಳಿಯಲ್ಲಿ ಉಪ ತಹಸೀಲ್ದಾರ್ ನಟರಾಜ್‌ಗೆ ವಕೀಲರ ಸಂಘ ಮನವಿ ಸಲ್ಲಿಸಿತು. ಅಧ್ಯಕ್ಷ ರಾಮನಗೌಡ ಪಾಟೀಲ, ಸಿ. ಪೀರ್ ಆಹ್ಮದ್, ಬಿ.ಎಸ್.ಎಂ. ಕೊಟ್ರಯ್ಯ, ಕೇಶವಮೂರ್ತಿ, ವಿ.ಹುಲೆಪ್ಪ, ತಿಪ್ಪೇಶ್ ಬಡಕಪ್ಪ, ಹಾಲೇಶ್ ಸಿ. ಇತರರಿದ್ದರು.
Published on

ಹರಪನಹಳ್ಳಿ: ತುಮಕೂರಿನಲ್ಲಿ ವಕೀಲನ ಮೇಲೆ ಸಿಪಿಐ ಹಲ್ಲೆ ಖಂಡಿಸಿ ವಕೀಲರ ಸಂಘ ಸೋಮವಾರ ಉಪ ತಹಸೀಲ್ದಾರ್ ನಟರಾಜ್‌ಗೆ ಮನವಿ ಸಲ್ಲಿಸಿತು.

ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಮಾತನಾಡಿ, ರೈಲ್ವೆ ಇಲಾಖೆಯು ಅನಧಿಕೃತವಾಗಿ ಜಮೀನು ಸ್ವಾಧೀನ ಪಡಿಸಿಕೊಂಡಿರುವುದನ್ನು ಪ್ರಶ್ನಿಸಿದ್ದಕ್ಕೆ ವಕೀಲ ರವಿಕುಮಾರ್ ಹಾಗೂ ಅವರ ತಂದೆ ಮೇಲೆ ಸಿಪಿಐ ದಿನೇಶ್ ಕುಮಾರ್ ಮನಬಂದಂತೆ ಹಲ್ಲೆ ನಡೆಸಿದ್ದು ಖಂಡನೀಯ.

ಸಿಪಿಐ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಕೀಲರಾದ ಕಂಡ್ಯೆಪ್ಪ ಕೆ, ಪ್ರಭಾಕರ್ ಎಸ್, ನಳಿನಾ ಕುಮಾರಿ, ಸಣ್ಣ ನಿಂಗನಗೌಡ, ಹುಲಿಯಪ್ಪನವರ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net