ಡಿ.24ರಿಂದ 26ರ ವರೆಗೆ ಸಿಪಿಐ ಶತಮಾನೋತ್ಸವ ಕಾರ್ಯಕ್ರಮ

cpi
Published on

ಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಡಿ 24ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ. 26ರಂದು ಬೆಳಗ್ಗೆ 11 ಗಂಟೆಗೆ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಿಪಿಐ ಪ್ರ. ಕಾರ್ಯದರ್ಶಿ ಬಿ. ಶೇಖರ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಡಿ. 25ರಂದು ಬೆಳಗ್ಗೆ 11ಕ್ಕೆ ಕೇರಳದ ನೀಲೇಶ್ವರ ಸಮೀಪದ ಕಯ್ಯೂರಿನ ಹುತಾತ್ಮ ರೈತ ಹೋರಾಟಗಾರರ ಸ್ಮಾರಕದಲ್ಲಿ ಸಂಭ್ರಮಾಚರಣೆಗೆ ಚಾಲನೆ ದೊರೆಯಲಿದೆ. ಸಂಜೆ 3.30ಕ್ಕೆ ತೊಕ್ಕೊಟ್ಟು ಉಳ್ಳಾಲ ನಗರದಲ್ಲಿ ಸ್ವಯಂ ಸೇವಕರ ಪ್ರಚಾರ ಜಾಥ ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಉಳ್ಳಾಲ ರಾಣಿ ಅಬ್ಬಕ್ಕ ವೃತ್ತ ಬಳಿಯ ಕಡಲ ಕಿನಾರೆಯಲ್ಲಿ ಸಾಂಸ್ಕೃತಿಕ ಸಂಜೆ, ಭಾರತೀಯ ಜಲಕಲಾ ಸಮಿತಿಯಿಂದ ಹೋರಾಟ ಗೀತೆಗಳು ಕವಿ, ಕಲಾವಿದ ಹುಸೇನ್ ಕಾಟಿಪಳ್ಳ ಮತ್ತು ಬಳಗಿಂದ ಜನಪದೀಯ ಸೌಹಾರ್ದ ಗೀತೆಗಳನ್ನು ಒಳಗೊಂಡ ಸಂಗೀತ ರಸಮಂಜರಿ ಪ್ರೀತಿದ ಪೂ ಕಲಾತಂಡದಿಂದ ಸಿಂಹ ಕುಣಿತ ನಡೆಯಲಿದೆ.

ಡಿ. 26ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಮಿನಿ ವಿಧಾನ ಸೌಧದಿಂದ ವರ್ಣರಂಜಿತ ಮೆರವಣಿಗೆ ಬಳಿಕ ಬಹಿರಂಗ ಸಭೆ 11ಕ್ಕೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಶತಮಾನೋತ್ಸವದ ಸಂಭ್ರಮಾಚರಣೆಯ ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ, ಶಿಕ್ಷಣ ತಜ ಡಾ. ಜಿ. ರಾಮಕೃಷ್ಣ , ಸಮಿತಿಯ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

ಹಲವು ಹೋರಾಟಗಳ ಮೂಲಕ ಮುಂಚೂಣಿಯಲ್ಲಿರುವ ಸಿಪಿಐ ಪಕ್ಷ ಶತಮಾನೋತ್ಸವದ ಹಾದಿಯಲ್ಲಿ ರಾಜಕೀಯವಾಗಿ ಹಿಂದೆ ಸರಿದಿರುವ ಕುರಿತಂತೆ ಅವಲೋಕನ ನಡೆಯಲಿದೆಯೇಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಚುನಾವಣಾ ಸುಧಾರಣೆ ಬಗ್ಗೆ ಜನರನ್ನು ಜಾಗೃತಗೊಳಿಸುವ ಕಾರ್ಯ ನಡೆಯಲಿದೆ ಎಂದರು.

ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ಶೇಖರ್, ಕೋಶಾಧಿಕಾರಿ ಕರುಣಾಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net