ಸಿಪಿಐ ಬಿ.ಎಸ್.ಮಂಟೂರ ಅಮಾನತಿಗೆ ಒತ್ತಾಯ

7Rayabag1
Published on

ರಾಯಬಾಗ: ವಕೀಲ ಬಿ.ಎಸ್.ಪಾಟೀಲ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಸಿಪಿಐ ಬಿ.ಎಸ್.ಮಂಟೂರ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ರಸ್ತೆ ಸಂಚಾರ ತಡೆ ನಡೆಸಿ ತಹಸೀಲ್ದಾರ್ ಸುರೇಶ ಮುಂಜೆ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ ಮಾತನಾಡಿ, ದುಷ್ಕರ್ಮಿಗಳು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ವಕೀಲ ಬಿ.ಎಸ್.ಪಾಟೀಲ ದೂರು ನೀಡಲು ಹೋದಾಗ ಸಿಪಿಐ ಬಿ.ಎಸ್.ಮಂಟೂರ ಪ್ರಕರಣ ದಾಖಲಿಸಿಕೊಳ್ಳದೆ ಮರಳಿ ಕಳುಹಿಸಿದ್ದಾರೆ. ಬಳಿಕ ವಕೀಲರ ಸಂಘದ ಸದಸ್ಯರು ದೂರು ನೀಡಲು ಹೋದಾಗಲೂ ಮೂರ್ನಾಲ್ಕು ಗಂಟೆ ಠಾಣೆ ಹೊರಗೆ ನಿಲ್ಲಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಘಟನೆ ಕುರಿತು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ತೋರಿಸಿದ ಬಳಿಕ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ತನಿಖೆ ಕೈಗೊಳ್ಳದೆ ವಕೀಲ ಬಿ.ಎಸ್.ಪಾಟೀಲ ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಹಿರಿಯ ವಕೀಲರಾದ ಎ.ಬಿ.ಮಂಗಸೂಳೆ, ಆರ್.ಎಸ್.ಶಿರಗಾಂವೆ, ಆರ್.ಎಚ್.ಗೊಂಡೆ, ಟಿ.ಕೆ.ಶಿಂಧೆ, ಎಸ್.ಕೆ.ರೆಂಟೆ, ಆರ್.ಎಂ.ಹೆಗಡೆ, ಆರ್.ಟಿ.ನಾಗರಾಳೆ, ಬಿ.ಬಿ.ಈಟಿ ಮಾತನಾಡಿದರು.

ವಕೀಲರಾದ ಎಸ್.ಬಿ.ಬಿರಾದಾರಪಾಟೀಲ, ಯು.ಎನ್.ಉಮ್ರಾಣಿ, ಎಂ.ಪಿ.ತೇಲಿ, ಎಂ.ಜಿ.ಉಗಾರೆ, ಎಂ.ಎಂ.ಚಿಂಚಲಿಕರ, ಆರ್.ಎ.ಗೆನ್ನೆನ್ನವರ, ಜಿ.ಎಸ್.ಪವಾರ, ಕೆ.ಆರ್.ಕೋಟಿವಾಲೆ, ಪಿ.ಆರ್.ಗುಡೋಡಗಿ, ವಿ.ಎಂ.ಗಲಗಲಿ, ಎ.ಬಿ.ನಡೋಣಿ, ಎಲ್.ಆರ್.ಪಡತರೆ, ಆರ್.ಎಚ್.ನಾಗರಮುನ್ನೋಳ್ಳಿ, ಆರ್.ಎಸ್.ಬುಗಡಿಗಟ್ಟಿ, ಬಿ.ಎಂ.ಮುಲ್ಲಾ, ಎ.ಬಿ.ನಾಗರಾಳೆ, ಎಸ್.ಸಿ.ದೀಕ್ಷಿತ, ಎಸ್.ವಿ.ಸಂಗೋಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net