ಆಕಳು ತಿವಿದು ಗಾಯಗೊಂಡಿದ್ದ ಯುವಕ ಸಾವು

Published on

ಹಾವೇರಿ: ಆಕಳು ತಿವಿದು ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬಸವರಾಜ ನಾಗಪ್ಪ ಹೊನ್ನತ್ತಿ (19) ಮೃತ ಯುವಕ.
ದೀಪಾವಳಿ ಹಬ್ಬದ ದಿನದಂದು ಗ್ರಾಮದಲ್ಲಿ ಹೋರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಪಟಾಕಿ ಹಾಗೂ ಡೊಳ್ಳಿನ ಸದ್ದಿಗೆ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳು ಹಗ್ಗ ಹರಿದು ಕೊಂಡು ಓಡಿ ಹೋಗಿತ್ತು. ಬಸವರಾಜ ಅದನ್ನು ಹಿಡಿದುಕೊಂಡು ಬರುತ್ತಿದ್ದ ಸಮಯದಲ್ಲಿ ಮತ್ತೆ ಪಟಾಕಿ ಸದ್ದಿಗೆ ಹೆದರಿದ ಆಕಳು ಬಸವರಾಜನ ಹೊಟ್ಟೆಗೆ ತಿವಿದಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net