ಆಕಳಿನ ಮೈ ತೊಳೆಯಲು ಹೋದ ವ್ಯಕ್ತಿ ಕೆರೆಯಲ್ಲಿ ಮುಳಗಿ ಸಾವು

Crime Logo
Published on

ಹಾನಗಲ್ಲ: ಕೆರೆಗೆ ಆಕಳು ಮೈ ತೊಳೆಯಲು ಹೋದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ಬಸವರಾಜ ಭರಮಪ್ಪ ಮೂಲಿ (25) ಮೃತ ವ್ಯಕ್ತಿ.
ಈತ ಆಕಳು ಮೈ ತೊಳೆಯಲು ಗ್ರಾಮದ ಮನೋಹರ ನಗರದ ಕಲಕಟ್ಟಿ ಕೆರೆಗೆ ಹೋದಾಗ ಆಕಳಿಗೆ ಕಟ್ಟಿದ್ದ ಹಗ್ಗ ಆತನ ಕಾಲಿಗೆ ಸಿಲುಕಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net