ಹಳಿಯಾಣ ಪೊಲೀಸರಿಂದ ಗೋವುಗಳ ರಕ್ಷಣೆ

COW
Published on

ಹಳಿಯಾಳ: ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ ಎರಡು ಗೋವುಗಳನ್ನು ಹಳಿಯಾಳ ಠಾಣೆ ಪೊಲೀಸರು ಗುರುವಾರ ರಕ್ಷಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಳಿಯಾಳ- ಅಳ್ನಾವರ ರಾಜ್ಯ ಹೆದ್ದಾರಿಯ ತೇರಗಾಂವ ಗ್ರಾಮದ ಬಳಿ ಗೂಡ್ಸ್ ವಾಹನದಲ್ಲಿ ಎರಡು ಆಕಳುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾಕಿ ಪಡೆ, ಜಾನುವಾರುಗಳನ್ನು ಹಾಗೂ ವಾಹನವನು ವಶಕ್ಕೆ ಪಡೆಯಿತು. ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಚಮನಸಾಬ ಭಾಗವಾನ, ಅಯುಬ್ ಬೇಪಾರಿ, ನವೀದ್ ರಾಜೇಸಾಬ್ ರಿತ್ತಿ, ಬಾಬುಸಾಬ್ ಬೇಪಾರಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವುಗಳನ್ನು ತಾಲೂಕಿನ ದುಸಗಿ ಗ್ರಾಮದ ಪುಣ್ಯಕೋಟಿ ಗೋ ಶಾಲೆಗೆ ರವಾನಿಸಲಾಗಿದೆ. ಪೊಲೀಸ್ ಸಿಬ್ಬಂದಿ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಎ. ನದಾಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net