ಗೋವಿನ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠ

Cow's milk is as good as mother's milk.
ಕೋಟೆಕಲ್-ಇಂಜಿನವಾರಿ ಶ್ರೀಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ನಡೆದ 101 ಗೋವುಗಳ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಒಪ್ಪತ್ತೇಶ್ವರ ಶ್ರೀಗಳು, ಅಮೀನಗಡದ ಶ್ರೀಶಂಕರ ಪ್ರಭುರಾಜೇಂದ್ರ ಶ್ರೀಗಳು, ತಹಶೀಲ್ದಾರ ಎಸ್.ಎ್. ಬೊಮ್ಮಣ್ಣವರ ಗೋ ಪೂಜೆ ನೆರವೇರಿಸಿದರು.
Published on

ಗುಳೇದಗುಡ್ಡ: ಭಾರತೀಯರ ಪಾಲಿಗೆ ಗೋವು ಪೂಜ್ಯನೀಯ. ನಮ್ಮ ಸಂಸ್ಕೃತಿಯಲ್ಲಿ ಗೋವುಗಳಿಗೆ ಮಾತೃ ಸ್ಥಾನವನ್ನೇ ನೀಡಿದ್ದೇವೆ. ಹಾಲಿನ ಕೊರತೆಯಾದಾಗ ಮಕ್ಕಳಿಗೆ ಗೋವಿನ ಹಾಲು ಉಣಿಸುವುದು ಉತ್ತಮ. ಗೋವಿನ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠವಾಗಿದೆ ಎಂದು ಒಪ್ಪತ್ತೇಶ್ವರ ಮಠ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.

ಕೋಟೆಕಲ್- ಇಂಜಿನವಾರಿ ಶ್ರೀಗುರು ಒಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಸೋಮವಾರ ನಡೆದ ಗೋವುಗಳ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಗೋ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗೋವು ನೀಡುವ ಹಾಲು, ಸಗಣಿ ಸೇರಿದಂತೆ ಎಲ್ಲವೂ ನಮ್ಮ ನಿತ್ಯದ ಬಳಕೆಗೆ ಅವಶ್ಯವಿದೆ ಎಂದು ಹೇಳಿದರು.

ತಹಸೀಲ್ದಾರ ಎಸ್.ಎ್ ಬೊಮ್ಮಣ್ಣವರ ಮಾತನಾಡಿ, ಗೋವುಗಳು ಭಾರತೀಯರ ಜೊತೆಗೆ ಬೆಳೆದು ಬಂದಿವೆ. ಗೋವಿನ ಹಾಲು ಸೇವನೆ ಮಾಡಿದರೆ ಮಕ್ಕಳು ಆರೋಗ್ಯಯುತವಾಗಿರುತ್ತಾರೆ. ಗೋವುಗಳ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಎಂದರು.

ಅಮೀನಗಡದ ಶ್ರೀ ಶಂಕರ ಪ್ರಭುರಾಜೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಡಾ. ಚಂದ್ರಕಾಂತ ಜವಳಿ, ಟ್ರಸ್ಟ್‌ನ ಕಾರ್ಯದರ್ಶಿ ಮಹಾಂತೇಶ ಹಿರೇಮಠ, ರಂಗಪ್ಪ ಅಮರನ್ನವರ, ರಾಜು ಬೋನಗೇರಿ, ಮುತ್ತಪ್ಪ ಅಬಕಾರಿ, ಪರಸಪ್ಪ ಆಲೂರ, ಆನಂದ ತಿಪ್ಪಾ ಅಶೋಕ ರೋಜಿ, ಅಂಬರೇಷ ಕವಡಿಮಟ್ಟಿ, ರಾಜಗೋಪಾಲ ಉಂಡಿಗೇರಿ, ಮಲ್ಲು ತುಪ್ಪದ, ಶಂಕರ ಉಮಚಗಿ, ಮಲ್ಲು ತುಪ್ಪದ, ಹುಚ್ಚಪ್ಪ ಅಬಕಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net