

ರಟ್ಟಿಹಳ್ಳಿ: ಆಕಳುಗಳ ಮೈ ತೊಳೆಯಲು ಹೋದ ಯುವಕನೊಬ್ಬ ಕೆರೆಯಲ್ಲಿ ಮುಳಗಿ ಮೃತಪಟ್ಟ ಟನೆ ತಾಲೂಕಿನ ಹೊಸಕಟ್ಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ರಾಕೇಶ ಜಯಪ್ಪ ಹಿರೇಮತ್ತೂರ (21) ಮೃತ ಯುವಕ.
ಈತ ಗ್ರಾಮದ ಕೆರೆಯಲ್ಲಿ ಆಕಳುಗಳ ಮೈ ತೊಳೆಯಲು ಹೋದ ಸಮಯದಲ್ಲಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.