ಆಕಳಿನ ಮೈ ತೊಳೆಯಲು ಹೋದ ಯುವಕ ಕೆರೆಯಲ್ಲಿ ಮುಳಗಿ ಸಾವು

Crime Logo
Published on

ಹಾನಗಲ್ಲ: ಆಕಳಿನ ಮೈ ತೊಳೆಯಲು ಹೋದ ಯುವಕ ಕೆರೆ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಹೋತನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಶ್ರೀಧರ ಶೇಖಪ್ಪ ಬಾಳಗೊಂಡರ (16) ಮೃತ ಯುವಕ.
ಈತ ಆಕಳಿನ ಮೈ ತೊಳೆಯಲು ಗ್ರಾಮದ ಜಕ್ಕಿನ ಕೆರೆಗೆ ಹೋದ ಸಮಯದಲ್ಲಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net