

ಹುಬ್ಬಳ್ಳಿ : ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಅರ್ಧ ಗಂಟೆಗೂ ಹೆಚ್ಚು ಸಮಯದವರೆಗೆ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ಗಂಗಿವಾಳ ಗ್ರಾಮದಲ್ಲಿ ಸಿಡಿಲಿಗೆ ಒಂದು ಆಕಳು ಹಾಗೂ ಎಮ್ಮೆ ಸತ್ತಿದೆ.
ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ನಿರ್ವಣಗೊಂಡಿತ್ತು. ಸುಮಾರು 10 ಗಂಟೆಗೆ ಪ್ರಾರಂಭಗೊಂಡ ಮಳೆ ರಭಸದಿಂದ ಸುರಿಯಿತು. ಹುಬ್ಬಳ್ಳಿಯಲ್ಲಿ ಬಿಆರ್ಟಿಎಸ್ ಮಾರ್ಗದ ರಸ್ತೆಗಳೆಲ್ಲ ನೀರಿನಿಂದ ತುಂಬಿದ್ದವು. ಹೊಲಗಳಿಗೆ ಹೋಗುವ ರಸ್ತೆಗಳೆಲ್ಲ ಕೆಸರಾಗಿದ್ದವು. ಬೆಳಗ್ಗೆಯಿಂದಲೇ ಮೋಡಮುಸುಕಿದ ವಾತಾವರಣ ಇದ್ದಿದ್ದರಿಂದ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.