ಕುರುಬ ಮುಖಂಡರಿಗೆ ರಕ್ಷಣೆ ನೀಡಿ

Untitled design (5)
ಗಂಗಾವತಿ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಹಾಲುಮತ ಕುರುಬ ಸಮಾಜದ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಸಮಾಜದ ತಾಲೂಕಾಧ್ಯಕ್ಷ ಯಮನಪ್ಪ ವಿಠಲಾಪುರ, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್ ಇತರರಿದ್ದರು.
Published on

ಗಂಗಾವತಿ: ರಾಜ್ಯದಲ್ಲಿ ಹಾಲುಮತ ಸಮಾಜದ ಮುಖಂಡರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಸಿಲು ಒತ್ತಾಯಿಸಿ ಹಾಲುಮತ ಕುರುಬ ಸಮಾಜದ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗದೆ ತಪ್ಪಿಸ್ಥರ ಕ್ರಮ ಕೈಗೊಳ್ಳಿ

ಬೀಳಗಿಯ ವಕೀಲ ಯಲ್ಲಪ್ಪ ಹೆಗಡೆ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಗಾವತಿ ತಾಲೂಕಿನ ಢಣಾಪುರದ ತಾಪಂ ಮಾಜಿ ಸದಸ್ಯ ಬಿ.ಕೀರಯ್ಯ ಅವರನ್ನು ಕೊಲೆಗೆ ಸಂಚು ರೂಪಿಸಿರುವ ಮೊಬೈಲ್ ಸಂಭಾಷಣೆ ವೈರಲ್ ಆಗಿದೆ. ಸಮಾಜದ ಮುಖಂಡರಿಗೆ ರಕ್ಷಣೆಯಿಲ್ಲದಂತಾಗಿದೆ. ಎರಡು ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರ ಪರಿಗಣಿಸಬೇಕಿದ್ದು, ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗದೆ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಾಜದ ತಾಲೂಕಾಧ್ಯಕ್ಷ ಯಮನಪ್ಪ ವಿಠಲಾಪುರ ಆಗ್ರಹಿಸಿದರು.

ಇದಕ್ಕೂ ಮುನ್ನ ಕನಕಗಿರಿ ರಸ್ತೆಯ ಶ್ರೀಬೀರಲಿಂಗೇಶ್ವರ ಸಮುದಾಯ ಭವನದಿಂದ ಬೈಕ್ ರ‌್ಯಾಲಿ ಮಾಡಲಾಯಿತು. ಬಳಿಕ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಸಲ್ಲಿಸಿದರು. ಸಮಾಜದ ಗುರುಗಳಾದ ಸಿದ್ದಯ್ಯ ಗುರುವಿನ್, ಸಿದ್ದರಾಮಯ್ಯಗುರುವಿನ್, ತಾಪಂ ಮಾಜಿ ಸದಸ್ಯ ಶರಣೇಗೌಡ ಮಾ.ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಸಮಾಜದ ಮುಖಂಡರಾದ ಸಿದ್ದಲಿಂಗಪ್ಪಗೌಡ, ಕೆ.ನಾಗೇಶಪ್ಪ, ಅಶೋಕಗೌಡ, ನವಲಿ ಯಮನಪ್ಪ, ಮೋರಿ ದುರುಗಪ್ಪ, ನೀಲಕಂಠ ಹೊಸಳ್ಳಿ, ಡ್ಯಾಗಿ ರುದ್ರೇಶ, ಆರ‌್ಹಾಳ ರುದ್ರೇಶ, ವೆಂಕಟೇಶ ಜಂತಕಲ್,ತಿರುಕಪ್ಪ ಸೇರಿ ಗಂಗಾವತಿ ನಗರ ಮತ್ತು ಗ್ರಾಮೀಣ ಘಟಕದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net