

ಮದ್ದೂರು: ಅಂಟು ಜಾಡ್ಯವಾಗಿರುವ ಕಾಲುಬಾಯಿ ರೋಗ ತಡೆಗಾಗಿ ರಾಸುಗಳಿಗೆ ಲಸಿಕೆ ಹಾಕಿಸಲು ಕೃಷಿಕರು ಮುಂದಾಗಬೇಕು ಎಂದು ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ( ಡೇರಿ) ಅಧ್ಯಕ್ಷೆ ರೂಪಾ ಹೇಳಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಏರ್ಪಡಿಸಿದ್ದ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಯೊಗೀಶ್ ಮಾತನಾಡಿ, ಕಾಲುಬಾಯಿರೋಗ ಅಂಟು ರೋಗವಾಗಿದೆ. ಒಮ್ಮೆ ಈ ರೋಗ ತಗುಲಿದರೆ ಸಾಂಕ್ರಾಮಿಕ ಮಾದರಿಯಲ್ಲಿ ಹರಡಲಿದೆ. ಆದ್ದರಿಂದ ಪಶುಪಾಲನೆ ಮತ್ತು ಪಶು ಸಂಗೋಪನೆಇಲಾಖೆ ಹಮ್ಮಿಕೊಂಡಿರುವ ಅಭಿಯಾನದಲ್ಲಿ ತಪ್ಪದೇ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದರು. ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಉಮೇಶ್‌ಕುಮಾರ್ ಮಾತನಾಡಿ, ಕಾಲುಬಾಯಿರೋಗದ ಕುರಿತು ರೈತರು ತಪ್ಪು ಅಭಿಪ್ರಾಯಗಳನ್ನು ತೊಡೆದು ಹಾಕಬೇಕು. 4 ತಿಂಗಳ ಮೇಲಿನ ಕರುಗಳಿಗೂ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.