ಹಸು ಸಾಗಿಸುತ್ತಿದ್ದವರ ಬಂಧನ

crime
Published on

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಬ್ಯಾಹಟ್ಟಿ ಕಡೆಗೆ ಅಕ್ರಮವಾಗಿ ಆರು ಹಸು ಸಾಗಿಸುತ್ತಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಸ್ಲೀಮ್ ಮುಲ್ಲಾ, ನದೀಮ್ ಬೇಪಾರಿ, ಖಾಜಾಸಾಬ್ ಬೇಪಾರಿ, ಶಾರುಖ್ ಬೇಪಾರಿ ಎಂಬುವವರನ್ನು ಬಂಧಿಸಿ, 1.47 ಲಕ್ಷ ರೂ. ಮೌಲ್ಯದ ಆರು ವಿವಿಧ ತಳಿಯ ಹೋರಿ, ಕರುಗಳನ್ನು ವಶಕ್ಕೆ ಪಡೆಯಲಾಗಿದೆ. ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಅವುಗಳಿಗೆ ಹಿಂಸೆ ಆಗುವಂತೆ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net