ಗೋವುಗಳಸಾಗಣೆ ತಡೆದ ಶಾಸಕ ಸಲಗರ

salagar
Published on

ಹುಲಸೂರು: ಹಿಂದುಪರ ಸಂಘಟನೆ ಕಾರ್ಯಕರ್ತರು ಮತ್ತು ಶಾಸಕ ಶರಣು ಸಾಗರ ಅಕ್ರಮವಾಗಿ ಗೋವುಗಳನ್ನು ಸಾಗಿಸುತಿದ್ದ ವಾಹನವನ್ನು ಬೆಟಬಾಲಕುಂದಾ ಗ್ರಾಮದ ಬಳಿ ಶುಕ್ರವಾರ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಾರಾಷ್ಟದ ನಿಲಂಗಾದಿಂದ ಎರಡು ಗೂಡ್ಡ್​ ವಾಹನಗಳಲ್ಲಿ ಗೋವುಗಳನ್ನು ತುಂಬಿ ಬಸವಕಲ್ಯಾಣ ಕಡೆ ಬರುತ್ತಿದ್ದ ವಾಹನ ಗಮನಿಸಿದ ಹಿಂದು ಸಂಘಟನೆಗಳ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಶಾಸಕ ಸಲಗರ ಸ್ಥಳಕ್ಕೆ ಭೇಟಿ ನೀಡಿ ಗೋವುಗಳನ್ನು ಗೋಶಾಲೆಗೆ ಒಪ್ಪಿಸುವ ಜತೆಗೆ ಸಾಗಿಸುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಿಪಿಐ ಅಲಿಸಾಬ್, ಪಿಎಸ್‌ಐ ಸುಭಾಷ ಕುಶುನೂರ ಮತ್ತು ತಂಡ ಗೋವುಗಳನ್ನು ಸಾಗಿಸುತ್ತಿದ್ದ ನಿಲಂಗಾದ ಶೇಖ ಇರ್ಫಾನ್ ಎಂಬುವನನ್ನು ಬಂಧಿಸಿ ೧೮ ಗೋವುಗಳನ್ನು ಔರಾದ್ ತಾಲೂಕಿನ ಸೋನಾಳ ಗ್ರಾಮದ ಗೋಶಾಲೆಗೆ ಕಳಿಸಿದ್ದಾರೆ. ವಶಕ್ಕೆ ಪಡೆದ ಜಾನುವಾರುಗಳಲ್ಲಿ ೬ ಗೋವು, ೫ ಕೋಣ, ೭ ಹೋರಿ ಕರುಗಳಿವೆ. ಹುಲಸೂರು ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net