ಪೊಲೀಸರ ಮೇಲೆ ಕಾರು ಹಾಯಿಸಲು ಹೊರಟ ಅಕ್ರಮ ಗೋ ಕಳ್ಳರು ಅಂದರ್‌

ankola-police
Published on

ಕಾರವಾರ:ಅಕ್ರಮವಾಗಿ ಗೋ ಕಳ್ಳತನ ಮಾಡಿಕೊಂಡು ಹೊರಟಿದ್ದ ಐದು ಜನರನ್ನು ಅಂಕೋಲಾ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಂಗಳೂರು ಸುರತ್ಕಲ್ ಕಾಟಿಪಳ್ಳದ ಅಬ್ದುಲ್ ಅಜೀಜ್ ಅಬ್ದುಲ್ ಖಾದರ್, ಚೊಕ್ಕಬೆಟ್ಟುವಿನ ಮೊಹಮದ್ ಮುಸ್ತಪಾ, ಮೊಹಮದ್ ಆಸಿಕ್ ಅಶ್ರಫ್, ಕೊಲ್ನಾಡ್ ಮುಲ್ಕಿಯ ಮೊಹಮ್ ನುಹಾನ್ ಷರೀಫ್, ಉಲ್ಲಾಳದ ಮೊಹಮದ್ ಇರ್ಬಾಜ್ ಬಂಧಿತರು. ಬಡಾಗೌಳಿಪಾಳಿಯ ಮೊಹಮದ್ ಅಜೀಂ ಎಂಬಾತ ತಪ್ಪಿಸಿಕೊಂಡಿದ್ದಾನೆ. ಅವರಿಂದ ಎರಡು ಕಾರು, ಹಗ್ಗ, ಮೊಬೈಲ್‌ಗಳು ಹಾಗೂ ಇತರ ಹಲವು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡು ಆಕಳುಗಳನ್ನು ರಕ್ಷಿಸಲಾಗಿದೆ.

ಬುಧವಾರ ಬೆಳಗ್ಗೆ 4.45 ರ ಸುಮಾರಿಗೆ ಅಂಕೋಲಾ ರೈಲ್ವೆ ನಿಲ್ದಾಣದ ಬಳಿ ಆಕಳುಗಳನ್ನು ತುಂಬಿಕೊಂಡು ಹೊರಟಿದ್ದರು. ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ಹಾಗೂ ಸಿಬ್ಬಂದಿ ನಾಕಾಬಂಧಿ ಮಾಡಿ ತಡೆದಿದ್ದರು. ಈ ಸಮಯದಲ್ಲಿ ಪೊಲೀಸರ ಮೇಲೆ ವಾಹನ ಹಾರಿಸಿ, ತಪ್ಪಿಸಿಕೊಂಡು ಹೊರಟಿದ್ದರು. ನಂತರ ಅವರನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

ಅಂಕೋಲಾ ಠಾಣೆಯ ಎಎಸ್‌ಐ ಮಹಾಬಲೇಶ್ವರ ಸಿ.ಗಡೇರ, ಸಿಎಚ್‌ಸಿ ಚಂದ್ರಕಾಂತ ಗೌಡ, ಸಿಬ್ಬಂದಿ ಶ್ರೀಕಾಂತ ಕಟಬರ, ಆಸಿಫ್ ಕುಂಕೂರು, ಮನೋಜ ಡಿ., ಸಲೀಂ ಮುಖಾಶಿ, ಅರುಣ ಮೇತ್ರಿ, ಮಂಜುನಾಥ ಅಡಗಿ, ರವಿ ಹಡಪದ, ಡಿಎಆರ್ ಸಿಬ್ಬಂದಿ ರಾಜು ಅಸ್ನೋಟಿಕರ್, ಶಿವಮೂರ್ತಿ ಗುನಗಾ, ಪರೇಶ ನಾಯ್ಕ, ಸತೀಶ ಕೊಗ್ರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net