

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದಲ್ಲಿ ನಡೆದ ದನಕಳವು ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುರುನಗರ ಬಂಗ್ಲಗುಡ್ಡೆ ನಿವಾಸಿ ಮಹಮ್ಮದ್ ಅಶ್ಫಕ್ (22), ಗುರುಪುರ ಅಡ್ಡೂರು ನಿವಾಸಿ ಅಜರುದ್ದೀನ್ ಯಾನೆ ಅಜರ್ (31), ಬಜಾಲ್ ಪಡ್ಪು ನಿವಾಸಿ ಸುಹೈಲ್ (19), ಪಕಲಡ್ಕ ನಿವಾಸಿ ಮೊಹಮ್ಮದ್ ಅಫ್ರೀದ್ (25), ಬಜಾಲ್ ನಿವಾಸಿ ಶಾಹೀದ್ ಯಾನೆ ಚಾಯಿ (19) ಬಂಧಿತರು.
ಬಜಾಲ್ ದೋಟ ಹೌಸ್ ನಿವಾಸಿ ಅಶ್ವಿನ್ ದನಕರುಗಳನ್ನು ಸಾಕಿಕೊಂಡಿದ್ದು, ಜು.21ರಂದು ಬೆಳಗ್ಗೆ 3.30ರ ವೇಳೆಗೆ ಹಸು ಕೂಗಿದ ಶಬ್ದ ಕೇಳಿ ಅಶ್ವಿನ್ ಅವರು ಹೊರ ಬಂದು ನೋಡಿದಾಗ ಕಳ್ಳರು ದನವೊಂದನ್ನು ಕಳವುಗೈದಿದ್ದರು. ಕಳವಾದ ಹಸುವಿನ ಮೌಲ್ಯ 40 ಸಾವಿರ ರೂ. ಆಗಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 5 ಮಂದಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮಾರುತಿ ಕಾರು, ಕತ್ತಿ, ಹಗ್ಗಗಳನ್ನ ಸ್ವಾಧೀನಪಡಿಸಿಕೊಂಡಿದ್ದಾರೆ.