ಹೂಳಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಸು ರಕ್ಷಣೆ

21 GVT 04
ಗಂಗಾವತಿ ಜುಲಾಯಿನಗರದ ಬಳಿ ಚರಂಡಿ ಹೂಳಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಸುವೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುತ್ತಿರುವುದು. ಪ್ರತಿನಿಧಿಗಳಾದ ರಾಕೇಶ,ರಂಗನಾಥ, ಮಲ್ಲಪ್ಪ, ಕಿರಣಕುಮಾರ, ಈೀರೇಶ, ಸುರೇಶ ಇತರರಿದ್ದರು.
Published on

ಗಂಗಾವತಿ: ನಗರದ ಜುಲಾಯಿನಗರದ ಬಳಿ ಚರಂಡಿ ಹೂಳಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಸುವೊಂದನ್ನು ಅಗ್ನಿಶಾಮಕ ಸಿಬ್ಬಂದಿ ಸೋಮವಾರ ರಕ್ಷಿಸಿದೆ.

ಚರಂಡಿಯಲ್ಲಿ ಬೆಳೆದ ಹುಲ್ಲು ತಿನ್ನಲು ಹಸು ಚರಂಡಿಯತ್ತ ಹೋದಾಗ ಹೂಳಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಹಸು ಸ್ಥಿತಿ ನೋಡಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.

ಅಗ್ನಿಶಾಮಕ ಇಲಾಖೆಯ ಪ್ರತಿನಿಧಿ ರಾಕೇಶ ನೇತೃತ್ವದ ತಂಡ ಅಗಮಿಸಿ, ಹಸುವನ್ನು ರಕ್ಷಿಸಿದೆ. ಅರ್ಧಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ, ಹಸು ರಕ್ಷಿಸಿದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಮಳೆ ನೀರು ನಿರ್ವಹಣೆ ಯೋಜನೆಯಡಿ ಬೃಹತ್ ಪ್ರಮಾಣದ ಚರಂಡಿಗಳನ್ನು ನಗರದಲ್ಲಿ ನಿರ್ಮಿಸಿದ್ದು, ನಿರ್ವಹಣೆ ಕೊರತೆಯಿಂದ ಹೂಳು ತುಂಬಿದೆ. ಇದೇ ಕಾರಣಕ್ಕಾಗಿ ಜಾನುವಾರುಗಳು ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದು, ನಗರಸಭೆ ನಿರ್ಲಕ್ಷ್ಯವಹಿಸುತ್ತಿದೆ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದರು.

ಅಗ್ನಿಶಾಮಕ ಇಲಾಖೆ ಪ್ರತಿನಿಧಿ ರಾಕೇಶ ಪ್ರತಿಕ್ರಿಯೆಸಿ, ಇಲಾಖೆ ಕಂಟ್ರೋಲ್ ರೂಂಗೆ ವ್ಯಕ್ತಿಯೊಬ್ಬರು ಕಾಲ್ ಮಾಡಿದ್ದರಿಂದ ಮಾಹಿತಿ ಗೊತ್ತಾಗಿದ್ದರಿಂದ ಹಸುವನ್ನು ರಕ್ಷಿಸಲಾಗಿದೆ. ಯಾವುದೇ ಅವಘಡ ಸಂಭವಿಸಿದರೂ ಇಲಾಖೆ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net