ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಶೀಘ್ರ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುಳಿವು

ct ravi
Published on

ಬೆಂಗಳೂರು: ಗೋ ಹತ್ಯೆ ನಿಷೇಧ ಕಾನೂನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂಬ ಬಹುಜನರ ಬೇಡಿಕೆ ಈಡೇರುವ ಸಮಯ ಸಮೀಪದಲ್ಲಿದೆ. ಹೀಗೊಂದು ಸುಳಿವನ್ನು ರಾಜ್ಯದ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶುಕ್ರವಾರ ನೀಡಿದ್ದಾರೆ.

ದ ಕರ್ನಾಟಕ ಪ್ರಿವೆನ್ಶನ್ ಆಫ್​ ಸ್ಲಾಟರ್​ ಆ್ಯಂಡ್ ಪ್ರಿವೆನ್ಶನ್​ ಆಫ್ ಕ್ಯಾಟಲ್​ ಬಿಲ್​ ಅನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಪಶು ಸಂಗೋಪಾನ ಸಚಿವ ಪ್ರಭು ಚವಾಣ್ ಅವರಲ್ಲಿ ವಿನಂತಿ ಮಾಡಿದ್ದೇನೆ. ಅವರೂ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಈ ಕೆಲಸ ನಡೆಯಲಿದೆ ಎಂದು ಸಿ.ಟಿ.ರವಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಿ.ಟಿ. ರವಿ ಕೆಲವು ದಿನಗಳ ಹಿಂದೆ ಲವ್ ಜಿಹಾದ್ ತಡೆಗೆ ಅಲಹಾಬಾದ್ ಹೈ ಕೋರ್ಟ್ ಆದೇಶದ ಅಂಶಗಳನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಮತಾಂತರ ಮಾಡುವುದಕ್ಕಾಗಿ ನಮ್ಮ ಸೋದರಿಯರನ್ನು ಪ್ರೀತಿ, ಪ್ರೇಮದ ಬಲೆಗೆ ಕೆಡವಿ ಬಲವಂತದ ಮತಾಂತರ ಮಾಡವುದನ್ನು ನೋಡುತ್ತ ಸುಮ್ಮನಿರಲಾಗದು. ಇಂತಹ ಕೆಲಸದಲ್ಲಿ ನಿರತರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇ ಬೇಕು ಎಂದು ಆಗ್ರಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net