

ಜೊಯಿಡಾ: ನಿರಂತರವಾಗಿ ಬೀಳುತ್ತಿರುವ ಮಳೆಗೆ ಬಾರಿ ಗಾತ್ರದ ಮರವೊಂದು ಕೊಟ್ಟಿಗೆ ಮೇಲೆ ಬಿದ್ದು ಒಂದು ಎತ್ತು ಸಾವನ್ನಪ್ಪಿರುವ ಘಟನೆ ಜೊಯಿಡಾ ತಾಲೂಕಿನ ಹುಡಸಾದಲ್ಲಿ ನಡೆದಿದೆ.
ಹುಡಸಾದ ನಾರಾಯಣ ಹೆಬ್ಬಾರ ಇವರ ಮನೆ ಪಕ್ಕದಲ್ಲಿ ಇರುವ ಜಾರುವಾರು ಕಟ್ಟುವ ಕೊಟ್ಟಿಗೆಯ ಮೇಲೆ ಬಾರಿ ಗ್ರಾತ್ರದ ಮರ ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಬುಡ ಸಮೇತ ಕಿತ್ತು ಬಿದ್ದು ಕೊಟ್ಟಿಗೆ ಸಂಪರ‍್ಣವಾಗಿ ಮುರಿದು ಬಿದ್ದಿದೆ. ಕೊಟ್ಟಿಗೆಯಲ್ಲಿ ಒಟ್ಟೂ 7 ದನಕರುಗಳು ಇದ್ದು ಇದರಲ್ಲಿ ಒಂದು ಎತ್ತು ಸಾವನ್ನಪ್ಪಿ ಎರಡು ಧನಗಳು ಈ ಕೊಟ್ಟಿಗೆಯ ಅವಶೇಷದಲ್ಲಿ ಸಿಲುಕಿಕೊಂಡಿದ್ದವು. ಸ್ಥಳಕ್ಕೆ ಜೊಯಿಡಾ ಅಗ್ನಿಶಾಮಕ ಧಳ ಆಗಮಿಸಿ ಮರದಡಿ ಸಿಲುಕಿದ್ದ ಆಕಳಕರುವನ್ನ ರಕ್ಷಿಸಿದ್ದಾರೆ.
ಸ್ಥಳಕ್ಕೆ ಜೊಯಿಡಾ ತಹಶಿಲ್ದಾರ ಮಂಜುನಾಥ ಮುನ್ನೋಳಿ, ಪಶು ವೈದ್ಯಾಧಿಕಾರಿಗಳು ಬೇಟಿ ನೀಡಿದ್ದಾರೆ. ಜಾನುವಾರು ಸಾಕಣೆಯ ಕೊಟ್ಟಿಗೆ ಮುರಿದಿರುವ ಕಾರಣ ಲಕ್ಷಾಂತರ ಹಾನಿಯುಂಟಾಗಿದೆ. ಜೊತೆಗೆ ಒಂದು ಎತ್ತು ಸಾವನ್ನಪ್ಪಿದ್ದು,ಮತ್ತೋಂದು ಆಕಳ ಕಾಲು ಮುರಿದಿದೆ.