50 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸು ರಕ್ಷಣೆ

ಅಲಗುಮೂಲೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಮದಿ ಮೇಲೆತ್ತಿ ರಕ್ಷಿಸಿದರು. ಮಹೇಶ್, ಚಂದ್ರೇಗೌಡ, ಬಸವರಾಜು ಇತರರು ಇದ್ದರು.
ಅಲಗುಮೂಲೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಮದಿ ಮೇಲೆತ್ತಿ ರಕ್ಷಿಸಿದರು. ಮಹೇಶ್, ಚಂದ್ರೇಗೌಡ, ಬಸವರಾಜು ಇತರರು ಇದ್ದರು.
Published on

ಹನೂರು: ತಾಲೂಕಿನ ಅಲಗುಮೂಲೆ ಗ್ರಾಮದಲ್ಲಿ ಸೋಮವಾರ ರಾತ್ರಿ ಸುಮಾರು 50 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ.

ಗ್ರಾಮದ ಬಸವರಾಜು ಅವರು ಹಸುವನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಹಸು ಆಯತಪ್ಪಿ ಗಣೇಶ್ ಅವರ ಜಮೀನಿನ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಗಣೇಶ್ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದರು.

ಸ್ಥಳಕ್ಕಾಗಮಿಸಿದ ಪ್ರಭಾರ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಪೆರಿಯನಾಯಗಂ, ಆನಂದ್, ಅಶೋಕ್, ಹರ್ಷ, ಲೋಕೇಶ್ ಹಾಗೂ ಚಂದ್ರೇಗೌಡ ತಂಡ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಮೇಲೆತ್ತಿ ರಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net