ಗೋವು ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

4 YLP 1
Published on

ಯಲ್ಲಾಪುರ: ಗೋವಿನ ರಕ್ಷಣೆಯ ಹಿಂದೆ ಧರ್ಮದ ರಕ್ಷಣೆಯೂ ಇದೆ. ಗೋವಿನ ಸಂತತಿ ನಾಶವಾದರೆ ಮನುಷ್ಯನ ಭವಿಷ್ಯತ್ತಿಗೆ ಅಪಾಯ ಇದೆ ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಕರಡೊಳ್ಳಿಯಲ್ಲಿರುವ ಸ್ವರ್ಣವಲ್ಲೀ ಮಹಾಸಂಸ್ಥಾನದ ಗೋವರ್ಧನ ಗೋಶಾಲೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಳ್ಳಲಿರುವ ‘ಸ್ವರ್ಣ ನಂದಿನಿ’ ನೂತನ ಕಟ್ಟಡಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಗೋವನ್ನು ಪ್ರತಿ ಮನೆಯಲ್ಲಿ ಸಾಕಬೇಕು. ಸದಾ ಗೋವಿನ ರಕ್ಷಣೆ ಮಾಡಬೇಕು. ಇದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.

ಸೀಮಾಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವರ್ಧನ ಗೋ ಶಾಲೆಯ ಕಾರ್ಯಾಧ್ಯಕ್ಷ ರಾಮಕೃಷ್ಣ ಭಟ್ಟ ಕವಾಳೆ ದಂಪತಿ ಶ್ರೀಗಳಿಗೆ ಫಲ ಸಮರ್ಪಿಸಿದರು. ಸಮಿತಿಯ ಪ್ರಮುಖರಾದ ಎಲ್.ಪಿ. ಭಟ್ಟ ಗುಂಡ್ಕಲ್, ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಎಂ. ಎನ್. ಭಟ್ಟ ಕವಾಳೆ, ರಾಮಕೃಷ್ಣ ಭಟ್ಟ ಕವಡಿಕೆರೆ, ವಿ.ಎನ್. ಭಟ್ಟ ಆರತಿಬೈಲ, ಇತರರಿದ್ದರು.

ಗೋಶಾಲೆಯ ಸನಿಹದಲ್ಲೇ ಕಾಡಿನ ಮಧ್ಯದಲ್ಲಿ 2 ಸಾವಿರ ವರ್ಷಗಳ ಹಿಂದಿನ ಶಿವಲಿಂಗಕ್ಕೆ ಶ್ರೀಗಳು ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net