ಗೋವುಗಳ ರಕ್ಷಣೆ ಅನಿವಾರ್ಯ ಎಂದ ಕಾಳಿಚರಣ್ ಮಹಾರಾಜ್

kalicharan
Published on

ಕುಂದಾಪುರ: ಕರೊನಾ ಬಗ್ಗೆ ಭಯ ಬೇಡ, ಆದರೆ ಎಚ್ಚರಿಕೆ ಅಗತ್ಯ. ಹೋಮ ಹವನ ಮೂಲಕ ಕರೊನಾ ದೂರ ಮಾಡಲು ಸಾಧ್ಯ. ಗೋವಿನ ಉತ್ಪನ್ನ ತುಪ್ಪ ಬಳಕೆಯಿಂದ ಕರೊನಾ ಬರುವುದಿಲ್ಲ. ಕರೊನಾ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಹಾಕಿಕೊಟ್ಟ ನಿಯಮ ಪಾಲನೆ ಮಾಡಿ ಸೋಂಕು ಹಿಮ್ಮೆಟ್ಟಿಸೋಣ ಎಂದು ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ದೇವಿ ದರ್ಶನ ಪಡೆದು ಮಾತನಾಡಿ, ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಇತಿಹಾಸದ ಜತೆ ಭಾವನಾತ್ಮಕ ಸಂಬಂಧ ಇರಿಸಿಕೊಂಡಿರುವ ಗೋವುಗಳನ್ನು ರಕ್ಷಿಸುವ ಅನಿವಾರ್ಯತೆ ಇದೆ. ಅತ್ಯಾಚಾರ ಉತ್ತರಪ್ರದೇಶದಲ್ಲಿ ಮಾತ್ರ ಆಗುತ್ತಿಲ್ಲ. ಜಾತಿವಾದಗಳಿಂದಲೇ ಅತ್ಯಾಚಾರದಂತಹ ದುಷ್ಕೃತ್ಯಗಳು ಎಲ್ಲೆಡೆ ನಡೆಯುತ್ತಿದೆ. ಇಂತಹ ಘಟನೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದರು.

ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಶಕ್ತಿರಾಜ್, ಪ್ರತೀಕ್ ಶೆಟ್ಟಿ ಮೂಲ್ಕಿ, ಅಭಿಷೇಕ್ ಭಂಡಾರಿ ಎಕ್ಕಾರು, ಕಿಶನ್ ಶೆಟ್ಟಿ, ಶರತ್ ಹೆಗ್ಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net