ಗೋ ಸಂತತಿ ಉಳಿವು ಅನಿವಾರ್ಯ

7SND-02
ಸಿಂಧನೂರಿನಲ್ಲಿ ನಂದಿ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಸರ್ವೋತ್ತಮರೆಡ್ಡಿ ಮುಕ್ಕುಂದ, ನಗರಸಭೆ ಸದಸ್ಯ ಕೆ.ರಾಜಶೇಖರ, ಹೆಲ್ತ್ ಕ್ಲಬ್ ಅಧ್ಯಕ್ಷ ಕೆ.ಲಕ್ಷ್ಮಯ್ಯಶೆಟ್ಟಿ, ಸದಸ್ಯರಾದ ಬಸವರಾಜ ಸಿದ್ದಾಂತಿಮಠ, ಜಗದೀಶ ಇತರರಿದ್ದರು.
Published on

ಸಿಂಧನೂರು: ಪ್ರಸ್ತುತ ಯಾಂತ್ರಿಕ ಕಾಲದಲ್ಲಿ ರೈತರ ಅಭಿವೃದ್ಧಿ, ಜನಸಾಮಾನ್ಯರ ಆರೋಗ್ಯಕ್ಕಾಗಿ ಗೋ ಸಂತತಿ ಉಳಿವು ಅನಿವಾರ್ಯವಾಗಿದೆ ಎಂದು ವಿಜಯಪುರದ ಕೃಷಿ ತಜ್ಞ ಬಸವರಾಜ ಬಿರಾದಾರ್ ಹೇಳಿದರು.

ನಗರದಲ್ಲಿ ಸಾವಯವ ಕೃಷಿಕರ ಸಂಘ ಹಾಗೂ ಸಿಂಧನೂರು ಹೆಲ್ತ್ ಕ್ಲಬ್ ಹಮ್ಮಿಕೊಂಡಿದ್ದ ನಂದಿ ರಥಯಾತ್ರೆಗೆ ಸ್ವಾಗತ ಹಾಗೂ ತಾಲೂಕು ಜೋಡೆತ್ತುಗಳ ರೈತರ ಸಮಾವೇಶದಲ್ಲಿ ಬುಧವಾರ ಮಾತನಾಡಿದರು.

ತುರ್ವಿಹಾಳ ಪುರವರ ಹಿರೇಮಠದ ಅಮರಗುಂಡಯ್ಯ ಶಿವಾಚಾರ್ಯರು, ರಾಯಚೂರು ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಬಸವಣ್ಣೆಪ್ಪ, ನವೀನ್ ಬಂಟ್ವಾಳ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸರ್ವೋತ್ತಮರೆಡ್ಡಿ ಮುಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಜೋಡೆತ್ತು ಹೊಂದಿದ ರೈತರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ರಥಯಾತ್ರೆ ಮೆರವಣಿಗೆಯು ಬಂಗಾಲಿಕ್ಯಾಂಪಿನ ಕಲ್ಯಾಣ ಕುಮಾರ ಮಂಡಲ್‌ರ ಭಜನಾ ತಂಡದೊಂದಿಗೆ ಹಿರೇಹಳ್ಳ ಸೇತುವೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರಸಭೆ ಸದಸ್ಯ ಕೆ.ರಾಜಶೇಖರ, ಹೆಲ್ತ್ ಕ್ಲಬ್ ಅಧ್ಯಕ್ಷ ಕೆ.ಲಕ್ಷ್ಮಯ್ಯ ಶೆಟ್ಟಿ, ಸದಸ್ಯರಾದ ಬಸವರಾಜ ಸಿದ್ದಾಂತಿಮಠ, ಜಗದೀಶ ಕೆ, ಆನಂದ ಗೌರಕರ್, ಸಿದ್ದಲಿಂಗೇಶ, ಸಾವಯವ ಕೃಷಿಕರಾದ ರಾಮಚಂದ್ರರೆಡ್ಡಿ ಮುಕ್ಕುಂದ, ವೀರೇಶರೆಡ್ಡಿ, ಡಾ.ಶರಣಪ್ಪ ಗೊರೇಬಾಳ, ಡಾ.ಬಿಪುಲ್, ಚನ್ನಯ್ಯಸ್ವಾಮಿ, ಬಸವರಾಜ ರಂಗಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net