ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಗ್ರಾಮದಲ್ಲಿ ನೀರು ಕುಡಿಸುವ ವೇಳೆೆ ಎತ್ತಿನ ಗಾಡಿ ಸಮೇತ ದನಗಳು, ಮೇಕೆ ನಾಲೆಯ ನೀರುಪಾಲಾಗಿವೆ. ಗ್ರಾಮದ ರಾಜೇಗೌಡ ಕೃಷಿ ಚಟುವಟಿಕೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನೀರು ಕುಡಿಸಲು ಎತ್ತಿನ ಗಾಡಿಯನ್ನು ನಾಲೆಯ ರ‌್ಯಾಂಪ್ ಮೂಲಕ ಇಳಿಸಿದ್ದಾರೆ. ನಂತರ ನಾಲೆಯಿಂದ ಹೊರಬರಲು ಗಾಡಿ ತಿರುಗುವ ವೇಳೆ ನೀರಿನ ರಭಸಕ್ಕೆ ನಾಲೆಯೊಳಕ್ಕಿಳಿದಿದ್ದು ನೀರಿನ ಹರಿವಿನಿಂದ ಎತ್ತುಗಳು ನಾಲೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಗಾಡಿಯಲ್ಲಿ ಇದ್ದ ಮೇಕೆಯೂ ನೀರುಪಾಲಾಗಿದೆ. ರಾಜೇಗೌಡ ಗಾಡಿಯಿಂದ ಜಿಗಿದು ಪಾರಾಗಿದ್ದಾರೆ. ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮೃತ ಎತ್ತುಗಳು ಮತ್ತು ಮೇಕೆಯನ್ನು ಮೇಲೆತ್ತಿದರು. ಎತ್ತಿನ ಗಾಡಿಯನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.