ಹುಲಿ ದಾಳಿಗೆ ಹಸು ಬಲಿ

IMG-20250422-WA0349
ಹನಗೋಡಿನಲ್ಲಿ ಹಾಡು ಹಗಲೆ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿರುವುದು.
Published on

ಹನಗೋಡು: ಗ್ರಾಮದ ತೋಟವೊಂದರಲ್ಲಿ ಮಂಗಳವಾರ ಮಧ್ಯಾಹ್ನ ಹುಲಿ ದಾಳಿಗೆ ಹಸು ಬಲಿಯಾಗಿದೆ.

ಗ್ರಾಮದ ಚಂದ್ರೇಗೌಡ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ದಿಢೀರ್ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ರಕ್ತ ಹೀರಿ ಪಕ್ಕದ ತೋಟಕ್ಕೆ ಕಳೇಬರವನ್ನು ಎಳೆದೊಯ್ದದಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸುತ್ತಮುತ್ತ ದನಗಾಹಿ, ಕುರಿಗಾಹಿಗಳನ್ನು ತಕ್ಷಣವೇ ಸ್ಥಳದಿಂದ ತೆರಳುವಂತೆ ಎಚ್ಚರಿಸಿ ಕಳುಹಿಸಿದರು.

ವಾರದ ಹಿಂದೆ ಹೈರಿಗೆ ಗ್ರಾಮಗಳಲ್ಲಿ ಹಗಲು ವೇಳೆಯೇ ಹುಲಿ ಕಾಣಿಸಿಕೊಂಡು ಜನರಲ್ಲಿ ಗಾಬರಿ ಹುಟ್ಟಿಸಿದ್ದ ಬೆನ್ನಲ್ಲೇ ಕಚುವಿನಹಳ್ಳಿಯಲ್ಲಿ ಮೇಕೆಯನ್ನು ಕೊಂದು ಹಾಕಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೀಡು ಮಾಡಿತ್ತು.

ಹುಲಿ ಸೆರೆಗೆ ಆಗ್ರಹ: ಕಳೆದೆರಡು ವರ್ಷಗಳಿಂದ ಈ ಭಾಗದಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಆಗಾಗ್ಗೆ ಹುಲಿ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಇದಲ್ಲದೆ ಸಾಕು ಪ್ರಾಣಿಗಳಲ್ಲದೆ ಮನುಷ್ಯರ ಮೇಲೂ ಹುಲಿ ದಾಳಿ ನಡೆಯುತ್ತಿದೆ. ಕೂಡಲೇ ಬೋನು ಇಟ್ಟು ಹುಲಿ ಸೆರೆ ಹಿಡಿಯುವಂತೆ ‘ರೈತ ಗ್ರಾ.ಪಂ. ಸದಸ್ಯ ಶಿವಣ್ಣ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಸಿಬ್ಬಂದಿ ಕಾವಲು: ಸ್ಥಳದಲ್ಲಿ ಸಿಬ್ಬಂದಿ ಮುಕ್ಕಾಂ ಹೂಡಿ ಕಾವಲು ಕಾಯುತ್ತಿದ್ದಾರೆ. ಬುಧವಾರ ಸಾಕಾನೆಗಳ ಸಹಾಯದೊಂದಿಗೆ ಹುಲಿ ಕಾರ್ಯಚರಣೆ ನಡೆಸಲಾಗುವುದು ಎದು ಆರ್‌ಎಫ್‌ಒ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net