

ಸರಗೂರು : ಬಂಡೀಪುರ ಅರಣ್ಯ ವ್ಯಾಪ್ತಿಯ ನುಗು ಬಿರ್ವಾಳ್ ವಲಯದ ಹಾದನೂರು ಗ್ರಾಮದ ಜಮೀನಿನಲ್ಲಿ ಬುಧವಾರ ಹುಲಿ ದಾಳಿಗೆ ಹಸು ಮೃತಪಟ್ಟಿದೆ. ತಾಲೂಕಿನ ಹಾದನೂರು ಗ್ರಾಮದಲ್ಲಿ ಸೋಮೇಶ್ ಅವರಿಗೆ ಸೇರಿದ ಹಸು ಇದಾಗಿದೆ.
ಸೋಮೇಶ್, ಎಂದಿನಂತೆ ಹಸು ಹಾಗೂ ಎತ್ತುಗಳನ್ನು ಮೇಯಲು ಬಿಟ್ಟಿದ್ದರು. ಈ ಸಂದರ್ಭ ಹುಲಿ ದಾಳಿ ಮಾಡಿದೆ. ನುಗು ಬಿರ್ವಾಳ್ ಅರಣ್ಯಾಧಿಕಾರಿ ವಿವೇಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಸುವಿನ ಕತ್ತಿನ ಭಾಗದಲ್ಲಿ ಕಚ್ಚಿದ್ದು, ಬೆನ್ನಿನ ಭಾಗದಲ್ಲಿ ಉಗುರಿನಿಂದ ಗೀಚಿದ್ದು, ಇದು ಹುಲಿ ದಾಳಿ ಎಂದು ಅರಣ್ಯ ಇಲಾಖೆ ದೃಢಪಡಿಸಿದೆ.