ಹುಲಿ ದಾಳಿಗೆ ಹಸು ಬಲಿ

IMG-20240130-WA0043
Published on

ಎಚ್.ಡಿ.ಕೋಟೆ: ತಾಲೂಕಿನ ಮೊತ್ತ ಗ್ರಾಮದಲ್ಲಿ ಮಂಗಳವಾರ ಹುಲಿ ದಾಳಿಗೆ ಹಸು ಬಲಿಯಾಗಿದೆ.
ಗ್ರಾಮದ ರೈತ ಬಸವಣ್ಣ ಅವರು ಮಂಗಳವಾರ ಜಮೀನಿನಲ್ಲಿ ತಮ್ಮ ಹಸುವನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ ಹಸುವಿನ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಹಸುವನ್ನು ಕಚ್ಚಿ ಎಳೆದೊಯ್ಯಲು ಯತ್ನಿಸಿದೆ. ಈ ವೇಳೆ ರೈತರ ಚೀರಾಟದಿಂದ ಹಸುವಿನ ಕಳೇಬರ ಬಿಟ್ಟು ಹುಲಿ ಕಾಲ್ಕಿತ್ತಿದೆ. ಮೇಟಿಕುಪ್ಪೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net