ಚಿರತೆ ದಾಳಿಗೆ ಹಸು ಬಲಿ

ಚಿರತೆ ದಾಳಿಗೆ ಹಸು ಬಲಿ
ತೂಬಗೆರೆ ಹೋಬಳಿ ಚನ್ನಾಪುರದ ರೈತ ವೆಂಕಟೇಶ್ ಅವರ ತೋಟದ ಮನೆ.
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಸೀಗೇಹಳ್ಳಿಯ ತೋಟದ ಮನೆ ಬಳಿ ಮಂಗಳವಾರ ತಡರಾತ್ರಿ ಚಿರತೆ ದಾಳಿಗೆ ಹಸು ಬಲಿಯಾಗಿದೆ. 6 ತಿಂಗಳಲ್ಲಿ ಬಲಿಯಾದ ಎರಡನೇ ಹಸು ಇದಾಗಿದೆ.
ಗ್ರಾಮದ ರೈತ ವೆಂಕಟೇಶ್ ತೋಟದ ಮನೆ ಸಮೀಪದ ಕೊಟ್ಟಿಗೆಯಲ್ಲಿ ಹಸು ಕಟ್ಟಿದ್ದರು. ಮಂಗಳವಾರ ತಡರಾತ್ರಿ 12.30ರ ಸುಮಾರಿಗೆ ಹೊರಗಿನಿಂದ ಹಸು ಚೀರಾಟದ ಶಬ್ದ ಕೇಳಿ ಹೊರಬಂದಾಗ ಚಿರತೆ ತಿನ್ನುತ್ತಿರುವ ದೃಶ್ಯ ಕಂಡುಬಂದಿದೆ. ಗಾಬರಿಗೊಂಡ ವೆಂಕಟೇಶ್ ಕಟ್ಟಿಗೆಯಿಂದ ಜೋರು ಶಬ್ದ ಮಾಡಿದ ವೇಳೆ ಸ್ಥಳದಿಂದ ಕಾಲ್ಕಿತ್ತಿದೆ.
ಅಧಿಕಾರಿಗಳ ವಿರುದ್ಧ ಗರಂ: ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಲೆಕ್ಕಾಧಿಕಾರಿ ರಾಜಶೇಖರ್ ಹಾಗೂ ಅರಣ್ಯಾಧಿಕಾರಿ ಅಯ್ಯಣ್ಣಪ್ಪ ಪರಿಶೀಲನೆ ನಡೆಸಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸುವುದಾಗಿ ತಿಳಿಸಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಚಿರತೆ ಕಾಟದಿಂದ ಜಾನುವಾರುಗಳನ್ನು ಸಾಕುವಂತಿಲ್ಲ, ಕುರಿ ಮೇಕೆ ಹಸುಗಳು ಚಿರತೆಗೆ ಬಲಿಯಾಗುತ್ತಿವೆ ಮುಂದಿನ ದಿನಗಳಲ್ಲಿ ಚಿರತೆ ಮನುಷ್ಯರ ಮೇಲೂ ದಾಳಿ ಮಾಡುವ ಆತಂಕ ಇದೆ. ಅರಣ್ಯ ಇಲಾಖೆ ಚಿರತೆ ಹಾವಳಿ ತಡೆಯಲು ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net