ಕೃಷಿಯ ಮೂಲ ಆಧಾರ ಗೋವು

Cow is the basic basis of agriculture.
ತೇರದಾಳ ತಾಲೂಕು ಮಟ್ಟದ ಜೋಡೆತ್ತಿನ ಕೃಷಿಕರ ಸಮಾವೇಶ ಹಾಗೂ ಜೋಡೆತ್ತಿನ ಕೃಷಿಕರ ಕುರಿತು ವೈಜ್ಞಾನಿಕ ಚಿಂತನೆ ಕಾರ್ಯಕ್ರಮವನ್ನು ಶಾಸಕ ಸಿದ್ದು ಸವದಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಡಾ. ವಿ.ಐ. ಬೆಣಗಿ, ಬಸವರಾಜ ಬಿರಾದಾರ, ಪ್ರವೀಣ ನಾಡಗೌಡ ಮತ್ತಿತರರಿದ್ದಾರೆ.
Published on

ತೇರದಾಳ(ಗ್ರಾ):ಗೋವು ಆಧರಿತ ಕೃಷಿಯ ಮೂಲಕ ದೇಶದ ಸಂಸ್ಕೃತಿ ಹಾಗೂ ಮಣ್ಣನ್ನು ಉಳಿಸಿದರೆ ಮಾತ್ರ ನಾಗರಿಕತೆ ಉಳಿಯುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತೇರದಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಅಲ್ಲಮಪ್ರಭು ಜೋಡೆತ್ತಿನ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತೇರದಾಳ ತಾಲೂಕು ಮಟ್ಟದ ಜೋಡೆತ್ತಿನ ಕೃಷಿಕರ ಸಮಾವೇಶ ಹಾಗೂ ಜೋಡೆತ್ತಿನ ಕೃಷಿಕರ ಕುರಿತು ವೈಜ್ಞಾನಿಕ ಚಿಂತನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶಿ ವ್ಯಾಮೋಹದಿಂದ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಿರುವ ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ಗೋವು ಉಳಿಸುವ ಕಾರ್ಯವಾಗಬೇಕಿದೆ. ಸೆಗಣಿ ಗೊಬ್ಬರ ಉಪಯೋಗಿಸಿ, ಮಣ್ಣಿನ ಲವತ್ತತೆ ಹೆಚ್ಚಿಸಬೇಕು. ಮುಂದಿನ ಪೀಳಿಗೆಗೆ ಲವತ್ತಾದ ಮಣ್ಣು ಹಾಗೂ ಸಮೃದ್ಧ ದೇಶ ಬಿಟ್ಟು ಹೋಗಬೇಕು ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ವಿ.ಐ. ಬೆಣಗಿ ಮಾತನಾಡಿ, ದೇಶದ ಅಭಿವೃದ್ಧಿಗೆ ಮಣ್ಣಿನ ಸಂರಕ್ಷಣೆ ಅಗತ್ಯವಾಗಿದೆ ಎಂದರು.

ವಿಜಯಪೂರದ ಕೃಷಿ ತಜ್ಞ ಬಸವರಾಜ ಬಿರಾದಾರ ಉಪನ್ಯಾಸ ನೀಡಿದರು. ನಂದಿಕೂಗು ಪುಸ್ತಕ ಬಿಡುಗಡೆ ಮಾಡಲಾಯಿತು.

ಪ್ರವೀಣ ನಾಡಗೌಡ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬುಜಬಲಿ ಕೆಂಗಾಲಿ, ಸುರೇಶ ಕಬಾಡಗಿ, ಕೃಷಿ ಪಂಡಿತ ಧನಪಾಲ ಯಲ್ಲಟ್ಟಿ, ನಿಂಗಪ್ಪ ಮಲಾಬದಿ, ಮಾಜಿ ಸೈನಿಕ ಸುಭಾಸ ಮಾಕಾಳೆ, ಶಿರಸ್ಥೇದಾರ ಲಕ್ಷ್ಮಣರಾವ್ ಮಿರಜಕರ, ನಂದಿ ರಥ ಯಾತ್ರೆಯ ವಕ್ತಾರ ನವೀನ ಮತ್ತಿತರರಿದ್ದರು. ಈಶ್ವರ ಯಲ್ಲಟ್ಟಿ ನಿರೂಪಿಸಿದರು. ರಾಮಣ್ಣ ಹಿಡಕಲ್ಲ ಸ್ವಾಗತಿಸಿದರು. ಎಂ.ಬಿ. ಮಾಳೇದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net