

ಹನಗೋಡು : ಹನಗೋಡು ಹೋಬಳಿಯಲ್ಲಿ ಹುಲಿ ಉಪಟಳ ಮುಂದುವರಿದಿದ್ದು, ಮುತ್ತುರಾಯನಹೊಸಹಳ್ಳಿ ಗ್ರಾಮದಲ್ಲಿ ಮೇಯುತ್ತಿದ್ದ ಹಸುಮಿನ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದೆ.
ಗ್ರಾಮದ ರೈತ ಜಯಸ್ವಾಮಿ ಅವರ ಹಸು ಹುಲಿ ದಾಳಿಯಿಂದ ಗಾಯಗೊಂಡಿದೆ. ಜಯಸ್ವಾಮಿ ಅವರು ತಮ್ಮ ಜಮೀನಿನ ಬಳಿಯಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಇದನ್ನು ಕಂಡ ಜಯಸ್ವಾಮಿ ಜೋರಾಗಿ ಕಿರುಚಿಕೊಂಡಿದ್ದರಿಂದ ಹುಲಿ ಹಸುವನ್ನು ಬಿಟ್ಟು ಕಾಡಿನತ್ತ ಓಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.
ಮುತ್ತುರಾಯನಹೊಸಹಳ್ಳಿ ಬಳಿಯ ಹೈರಿಗೆ ಗ್ರಾಮದಲ್ಲಿ ಇತ್ತೀಚೆಗೆ ಜೋಳದ ಹೊಲದಲ್ಲಿ ಮುಂಜಾನೆ ಹುಲಿ ಓಡಾಡಿದ್ದನ್ನು ಗ್ರಾಮಸ್ಥರು ಕಂಡಿದ್ದರು, ಅಲ್ಲದೆ ಆಗಾಗ್ಗೆ ಕಾಣಿಸಿಕೊಳಿತ್ತಿದ್ದು ಸ್ಥಳೀಯರು ಭಯಭಿತರಾಗಿದ್ದಾರೆ.