ಗೋ ಅಕ್ರಮ ಸಾಗಾಟ ನಿಗ್ರಹಕ್ಕೆ ಎಸ್ಪಿಗೆ ವಿಎಚ್‌ಪಿ, ಬಜರಂಗದಳದ ಮನವಿ

ctd 13 bajarangadala
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚಿರುವ ಗೋವುಗಳ ಕಳವು ಹಾಗೂ ಸಾಗಾಟದ ಮಾಫಿಯಾ ತಡೆಯುವಂತೆ ಆಗ್ರಹಿಸಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಎಸ್ಪಿ ಜಿ.ರಾಧಿಕಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಗೋವುಗಳ ಕಳವು, ಅಕ್ರಮ ಸಾಗಾಟ ಇತ್ಯಾದಿ ಅಕ್ರಮಗಳ ಬಗ್ಗೆ ಈ ಹಿಂದೆ ಅನೇಕ ಬಾರಿ ರಕ್ಷಣಾ ಇಲಾಖೆಯ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಗಡಿ ಪ್ರದೇಶ, ಹೊರ ರಾಜ್ಯಗಳಿಗೆ ಎಗ್ಗಿಲ್ಲದೆ ಗೋವಿನ ಸಾಗಾಟ ನಡೆದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋ ಪ್ರಮುಖ ಪಿ.ರುದ್ರೇಶ್, ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್, ಸಂಚಾಲಕ ರಂಗಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net