

ಮುಳಬಾಗಿಲು: ತಾಲೂಕಿನ ಆವಣಿ ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ ಶನಿವಾರ ವಿಸ್ಮಯವೆಂಬತೆ ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದೆ. ರಾಮಸಂದ್ರದ ರೈತ ಯಲ್ಲಪ್ಪ ಅವರ ಮನೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಚಿತ್ರ ಕರುವಿಗೆ ಹಸು ಜನ್ಮ ನೀಡಿದ್ದು, ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿಯ ವಿಚಿತ್ರ ಕರು ಜನಿಸಿದೆ. ವಿಷಯ ಹರಡುತ್ತಿದ್ದಂತೆ ತಂಡೋಪತಂಡಗಳಾಗಿ ಜನರು ವೀಸಲು ಬರುತ್ತಿದ್ದಾರೆ.